Wednesday, November 2, 2016

ರಾಮನಗರ ಜಿಲ್ಲೆ

ರಾಮನಗರ ಜಿಲ್ಲೆಯ ವಿಶೇಷತೆಗಳು

1) ಕರ್ನಾಟಕದ ರೇಷ್ಮೆನಗರಿ ಎಂದು ಕರೆಯಲ್ಪಡುವ ಜಿಲ್ಲೆ ನಮ್ಮ ರಾಮನಗರ.

2) ಕರ್ನಾಟಕದ 2ನೇ ಮುಖ್ಯಮಂತ್ರಿ ಹಾಗೂ ವಿಧಾನಸೌದದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ತವರು ರಾಮನಗರ.

3) ರಾಮನಗರ ಜಿಲ್ಲೆಯ ಮಾಗಡಿಯ ನಾಡಪ್ರಭು ಕೆಂಪೇಗೌಡರು ವಿಶ್ವವಿಖ್ಯಾತ ಬೆಂಗಳೂರಿನ ಸ್ಥಾಪಕರು.

4) ಬೊಂಬೆಗಳ ನಗರಿ ಚನ್ನಪಟ್ಟಣದ ಬೊಂಬೆಗಳು ವಿಶ್ವಪ್ರಸಿದ್ಧವಾಗಿವೆ.

5) ಅಮೇರಿಕಾದ ಶ್ವೇತಭವನವನ್ನು ಚನ್ನಪಟ್ಟಣದ ಬೊಂಬೆಗಳು ಅಲಂಕರಿಸಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯ.

6) ಗಂಗ ವಂಶದ ರಾಜರ 4 ಪ್ರಮುಖವಾದ ರಾಜಧಾನಿಗಳಲ್ಲಿ ಚನ್ನಪಟ್ಟಣ ತಾಲ್ಲೂಕಿನ ಮಾಕುಂದ ಎಂಬ ಊರು ಕೂಡ ಒಂದು.

7) ಭಾರತೀಯ ಚಿತ್ರರಂಗದ ಮೈಲುಗಲ್ಲೆನಿಸಿದ ಹಿಂದಿಯ ಖ್ಯಾತ ಶೋಲೆ ಚಿತ್ರ ರಾಮನಗರದ ರಾಮದೇವರ ಬೆಟ್ಟದಲ್ಲಿ ಚಿತ್ರೀಕರಣಗೊಂಡು ಲೋಕವಿಖ್ಯಾತವಾಯಿತು.

8) ರಾಮನಗರವು ಜಾನಪದ ಕಲೆಗಳಿಗೆ ಹೆಸರುವಾಸಿಯಾದ ಜಿಲ್ಲೆ.ಚನ್ನಪಟ್ಟಣ ತಾಲ್ಲೂಕಿನ ಸಮೀಪ ಪ್ರಸಿದ್ಧವಾದ ಜಾನಪದ ಲೋಕವಿದೆ.

9) ಜಾನಪದ ಗಾಯನದಲ್ಲಿ ರಾಮನಗರದ ಬಾನಂದೂರು ಕೆಂಪಯ್ಯನವರು ಹೆಸರುವಾಸಿಯಾಗಿದ್ದರು.

10) ಕಾವೇರಿ ಮತ್ತು ಅರ್ಕಾವತಿ ನದಿಗಳ ಪವಿತ್ರ ಸಂಗಮವಾಗುವ ಸ್ಥಳ ಕನಕಪುರದ ಸಂಗಮ ಎಂಬ ಊರಿನಲ್ಲಿದೆ.

11) ದಕ್ಷಿಣ ಭಾರತದ ಪ್ರಖ್ಯಾತ ನಟಿಯಾದ ಪದ್ಮಭೂಷಣ ಡಾ!!.ಬಿ.ಸರೋಜಾದೇವಿಯವರು ಚನ್ನಪಟ್ಟಣದ ದಶವಾರ ಎಂಬ ಗ್ರಾಮದವರು.

12) ಕನ್ನಡನಾಡಿನ ಖ್ಯಾತ ಸಾಹಿತಿಗಳಾದ ನಾಡೋಜ ದೇ.ಜವರೇಗೌಡರ ಜನ್ಮಸ್ಥಳ ಚನ್ನಪಟ್ಟಣದ ಬಳಿಯ ಚಕ್ಕೆರೆ ಎಂಬ ಊರು.

13) ವಿಶ್ವದಲ್ಲೇ ಇತಿಹಾಸ ಪ್ರಸಿದ್ಧ ಸುಗ್ರೀವನ ದೇವಾಲಯ ಹೊಂದಿರುವ ಸ್ಥಳ‌ ಚನ್ನಪಟ್ಟಣ.

14) ಗಿಡಮರಗಳನ್ನೇ ತನ್ನ ಮಕ್ಕಳೆಂದು ಭಾವಿಸಿ, ಅವುಗಳನ್ನು ಸಂರಕ್ಷಿಸಿ ಬೆಳೆಸಿ ದೇಶಕ್ಕೇ ಆದರ್ಶ ಮಹಿಳೆಯಾದ ಸಾಲುಮರದ ತಿಮ್ಮಕ್ಕ ನವರ ಊರು ಮಾಗಡಿ.

15) ವಿಷ್ಣುಸಹಸ್ರ ನಾಮದಲ್ಲಿ ಉಲ್ಲೇಖವಾಗಿರುವ ಅಪ್ರಮೇಯ ಎಂಬ ನಾಮದ ವಿಶ್ವದಲ್ಲೇ ಏಕೈಕ ದೇವಾಲಯವಿರುವುದು ಚನ್ನಪಟ್ಟಣದ ಸಮೀಪದ ದೊಡ್ಡ ಮಳೂರು ಎಂಬ ಗ್ರಾಮದಲ್ಲಿ ಮಾತ್ರ.

16) ಕರ್ನಾಟಕ ರತ್ನ, ಪದ್ಮಭೂಷಣ ಸಿದ್ಧಗಂಗಾ ಶ್ರೀಗಳಾದ ಡಾ!!.ಶಿವಕುಮಾರ ಮಹಾಸ್ವಾಮಿಗಳ ಜನ್ಮಸ್ಥಳ ಮಾಗಡಿಯ ಸಮೀಪದ ವೀರಾಪುರ      ಗ್ರಾಮ

17) ಪದ್ಮಭೂಷಣ ಬಾಲಗಂಗಾಧರನಾಥ ಸ್ವಾಮಿಗಳ ಜನ್ಮಸ್ಥಳ ಬಿಡದಿ ಸಮೀಪದ ಬಾನಂದೂರು.

[18) ಭಾರತ ದೇಶದಲ್ಲಿ ಉದ್ದ ಕೊಕ್ಕಿನ ಹದ್ದುಗಳು ಅತಿ ಹೆಚ್ಚು ಕಂಡುಬರುವುದು ರಾಮನಗರದ ರಾಮದೇವರ ಬೆಟ್ಟದಲ್ಲಿ ಮಾತ್ರ.

19) ದಕ್ಷಿಣ ಭಾರತದಲ್ಲಿ ಅತಿದೊಡ್ಡ ಏಕಶಿಲಾ ಬೆಟ್ಟ ಇರುವುದು ರಾಮನಗರದಲ್ಲಿ.

[20) ಮಾಧ್ವ ಪರಂಪರೆಯಲ್ಲಿ ಬಂದ ಯತಿಗಳಾದ ಬ್ರಹ್ಮಣ್ಯತೀರ್ಥರ ಬೃಂದಾವನ ಚನ್ನಪಟ್ಟಣದ ಅಬ್ಬೂರು ಗ್ರಾಮದಲ್ಲಿ ಇದೆ.

[21) ವಿಜಯನಗರ ಸಾಮ್ರಾಜ್ಯದ ರಾಜಗುರುಗಳಾಗಿದ್ದ ವ್ಯಾಸರಾಯರು ಚನ್ನಪಟ್ಟಣದ ದೇವರಹೊಸಹಳ್ಳಿಯಲ್ಲಿ ಮುಖ್ಯಪ್ರಾಣ ಹನುಮಂತನ ವಿಗ್ರಹ   ಸ್ಥಾಪಿಸಿದ್ದಾರೆ.

22) ಪುರಂದರದಾಸರು  ಚನ್ನಪಟ್ಟಣದ ಅಪ್ರಮೇಯ ದೇವಾಲಯದಲ್ಲಿನ ಅಂಬೆಗಾಲು ಕೃಷ್ಣನ ಮೂರ್ತಿಯನ್ನು ನೋಡಿ ಪ್ರಸಿದ್ಧ ಕೀರ್ತನೆಯಾದ 'ಆಡಿಸಿದಳು ಯಶೋಧೆ ಸುಗುಣಾಂತರಂಗನ ಅಪ್ರಮೇಯನ` ಎಂಬ ಗೀತೆ ರಚಿಸಿದ್ದಾರೆ.

23) ಪ್ರತಿಷ್ಠಿತ ಪೋಲೀಸ್ ತರಬೇತಿ ಶಾಲೆ( PTS ) ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನಲ್ಲಿದೆ.

25) 1999ನೇ ಇಸವಿಯಲ್ಲಿ ಕನಕಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಖ್ಯಾತ ಸಾಹಿತಿ S.L.ಭೈರಪ್ಪನವರು ಅಧ್ಯಕ್ಷರಾಗಿದ್ದರು.

24) ಭಾರತ ದೇಶದಲ್ಲಿ ಕಪ್ಪುಬಣ್ಣದ  ಗ್ರಾನೈಟ್ ಶಿಲೆಗೆ ಕನಕಪುರ ಪ್ರಸಿದ್ಧಿಪಡೆದಿದೆ.

26) ಪ್ರಾಚೀನ ಕಾಲದಲ್ಲಿ ಚನ್ನಪಟ್ಟಣ ವೀಣೆ ತಂತಿಗಳ ತಯಾರಿಕೆಯಲ್ಲಿ ಪ್ರಸಿದ್ಧವಾಗಿದ್ದುದಕ್ಕೆ  ಐತಿಹಾಸಿಕ ದಾಖಲೆಗಳು ದೊರೆಯುತ್ತವೆ.

27) ಚನ್ನಪಟ್ಟಣವನ್ನು ಮೊದಲು ತಿಮ್ಮಪ್ಪ ರಾಜ ಅರಸು ಎಂಬ ಸಾಮಂತ ಆಳುತ್ತಿದ್ದರು.

28) ಚನ್ನಪಟ್ಟಣದ ಅಬ್ಬೂರ ಸಮೀಪ ಪುರಾಣ ಪ್ರಸಿದ್ಧ ಕಣ್ವ ಮಹರ್ಷಿಗಳು ತಪಸ್ಸು ಮಾಡಿದ್ದರಿಂದ ಈ ಭಾಗದಲ್ಲಿ ಹರಿಯುವ ನದಿಗೆ ಕಣ್ವನದಿ ಎಂದು ಹೆಸರು ಬಂದಿದೆ.

29) ರೇವಣಸಿದ್ದೇಶ್ವರ ಸ್ವಾಮಿಗಳ ಪುಣ್ಯಕ್ಷೇತ್ರ ರಾಮನಗರ ಸಮೀಪದ‌ ಅವ್ವೇರಹಳ್ಳಿಯ ಬೆಟ್ಟದಲ್ಲಿದೆ.

30) ವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಪಾದಕರಾದ ಶ್ರೀರಾಮಾನುಜಾಚಾರ್ಯರು ಕೆಲವು ದಿನಗಳು ಚನ್ನಪಟ್ಟಣದ ವರದರಾಜಸ್ವಾಮಿ ದೇವಾಲಯದಲ್ಲಿ ನೆಲೆಸಿ ಸಿದ್ಧಾಂತವನ್ನು ಪ್ರಚಾರ ಮಾಡಿದ್ದಾಗಿ ಉಲ್ಲೇಖವಿದೆ.

31) ಚನ್ನಪಟ್ಟಣದ ಪ್ರಾಚೀನ ಹೆಸರು '‌ ಚಂದದ ಪಟ್ಟಣ' ಎಂಬುದಾಗಿ ಇತ್ತು.

32) ರಾಮನಗರದ‌ ಪ್ರಾಚೀನ ಹೆಸರು ' ‌ಕ್ಲೋಸ್ ಪೇಟೆ '.

33) ಕನಕಪುರದ ಮೊದಲ ಹೆಸರು  'ಕಾನಕಾನ ಹಳ್ಳಿ' ಎಂದು ಕರೆಯಲಾಗುತ್ತಿತ್ತು.

34) ಕರ್ನಾಟಕ ರಾಜ್ಯದ ಏಕೈಕ ಕಾರು ತಯಾರಿಕಾ ಕಂಪನಿ "ಟೊಯೋಟಾ ಕಿರ್ಲೋಸ್ಕರ್ ಮೋಟಾರ್" ರಾಮನಗರದ ಬಿಡದಿ ಕೈಗಾರಿಕಾ ಪ್ರದೇಶದಲ್ಲಿದೆ.

35) ಮಾಗಡಿಯ ಸಾವನದುರ್ಗ ಬೆಟ್ಟ ಇತಿಹಾಸ ಪ್ರಸಿದ್ಧ ಹಾಗೂ ಪ್ರಾಕೃತಿಕ ಸೌಂದರ್ಯದಿಂದ ಕೂಡಿದೆ.

Wednesday, August 31, 2016

ಬೊಂಬೆಗಳ ಕಥೆ

ಚನ್ನಪಟ್ಟಣ ಬೊಂಬೆ ಕಥೆ ಕೇಳಿ!

ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿರುವ ಈ ಬಾರಿಯ ಗಣರಾಜ್ಯೋತ್ಸವದ ಪೆರೇಡ್‌ನ‌ಲ್ಲಿ ಕರ್ನಾಟಕದ ಚನ್ನಪಟ್ಟಣ ಬೊಂಬೆಗಳ ಸ್ತಬ್ಧ ಚಿತ್ರ ಪ್ರದರ್ಶನಗೊಳ್ಳಲಿದೆ. ಆದರೆ, ಚನ್ನಪಟ್ಟಣ ಗೊಂಬೆಗಳ ಹಿಂದೆ 200 ವರ್ಷಗಳ ಇತಿಹಾಸವಿದೆ. ಮೈಸೂರು ಹುಲಿ ಟಿಪ್ಪು ಸುಲ್ತಾನ್‌ ಪರಿಚಯಿಸಿದ ಈ ಕಲೆ ಇಂದು ದೇಶ- ವಿದೇಶಗಳಲ್ಲಿ ತನ್ನ ಚೆಲುವಿನ ಕಂಪು ಬೀರುತ್ತಿವೆ. ಚನ್ನಪಟ್ಟಣ ಬೊಂಬೆಗಳು ಅಮೆರಿಕದ ಶ್ವೇತ ಭವನದಲ್ಲೂ ಸ್ಥಾನ ಪಡೆದಿವೆ. ಈ ಬೊಂಬೆಗಳ ಮೇಲೆ ಅಪಾರ ಒಲವು ಬೆಳೆಸಿಕೊಂಡಿವ ಮೆಶೆಲ್‌ ಒಬಾಮಾ ಅವರಿಗೆ ಪ್ರೀತಿಯ ಧೊÂàತಕವಾಗಿ ಸಾಂಪ್ರದಾಯಿಕ ಕಲೆಯಲ್ಲಿ ಕೆತ್ತಿದ ಚನ್ನಪಟ್ಟಣದಗೊಂಬೆಗಳನ್ನೇ ನೀಡಲಾಗುತ್ತಿದೆ. ಹೀಗಾಗಿ ಬೊಂಬೆಗಳ ಇತಿಹಾಸದ ಮೇಲೆ ಕಣ್ಣುಹಾಸಿದಾಗ.....

ಟಿಪ್ಪು ಸುಲ್ತಾನ್‌ ಪರಿಚಯಿಸಿದ ಪರಂಪರೆ!

ಚನ್ನಪಟ್ಟಣ ಗೊಂಬೆ ಉದ್ಯಮಕ್ಕೆ ಸುಮಾರು 200 ವರ್ಷಗಳ ಇತಹಾಸವಿದೆ. ಮೈಸೂರು ಹುಲಿ ಟಿಪ್ಪು ಸುಲ್ತಾನ್‌ ಈ ಉದ್ಯಮದ ಕಾರಣಕರ್ತರು. 1759-1799ರಲ್ಲಿ ಪರ್ಷಿಯಾ ದೇಶದ ಕುಶಲಕರ್ಮಿಗಳನ್ನು ಕರೆಸಿ ರಾಮನಗರದ ಚನ್ನಪಟ್ಟಣದ ಜನತೆ ಬೊಂಬೆಯನ್ನು ನಿರ್ಮಿಸುವ ಕಲೆ ತಿಳಿಸಿಕೊಟ್ಟಿದ್ದರಿಂದ ಬೊಂಬೆ ಉದ್ಯಮ ಬೆಳೆಯಿತು. ನಂತರ ಇಲ್ಲಿನ ಬಾಬಾ ಸಾಹೇಬ್‌ಮಿಯಾ ಎಂಬ ಕುಶಲಕರ್ಮಿ ಆಧುನಿಕ ವಿಧಾನದ ಬೊಂಬೆ ಕೆತ್ತನೆಯ ಬಗ್ಗೆ ತಿಳಿದುಕೊಂಡು ಬಂದರು. ಬಳಿಕ ಮೈಸೂರು ದಿವಾನರಿಗೆ ತಮ್ಮ ಕಲೆಯ ಬಗ್ಗೆ ತಿಳಿಸಿದರು. ಇದರಿಂದ ಪ್ರೇರೇಪಿತರಾದ ಮೈಸೂರು ದಿವಾನರು 1902ರಲ್ಲಿ ಚನ್ನಪಟ್ಟಣ ಕುಶಲಕರ್ಮಿ ತರಬೇತಿ ಸಂಸ್ಥೆ ಆರಂಭಿಸಿದರು. ಇಲ್ಲಿ ಅರಗು, ಬಣ್ಣ, ತೆಂಗಿನ ನಾರಿನ ಬೊಂಬೆಗಳ ತಯಾರಿಗಳ ಕುರಿತು ತರಬೇತಿ ನೀಡಲಾಗುತ್ತಿತ್ತು. ಕಾಲ ಕಳೆದಂತೆ ಬೊಂಬೆಗಳ ತಯಾರಿ ಬದಲಾವಣೆ ಗೊಂಡಿತು. ಆನೆಯ ದಂತ ಮತ್ತು ಮರಗಳನ್ನು ಬಳಸಿ ಸಾಂಪ್ರದಾಯಿಕ ಬೊಂಬೆಗಳನ್ನು ತಯಾರಿಸುವ ಕಲೆ ಬೆಳೆದುಬಂದಿದೆ. ಇಂದು ಗಂಧದ ಮರ, ಆಲೆ, ರಬ್ಬರ್‌, ಪೈನ್‌, ತೇಗದಮರಗಳನ್ನು ಬೊಂಬೆಗಳ ತಯಾರಿಕೆಗೆ ಹೆಚ್ಚಾಗಿ ಬಳಸಲಾಗುತ್ತಿದೆ.

ಬೊಂಬೆಗಳ ತವರು ಚನ್ನಪಟ್ಟಣ:

ಚನ್ನಪಟ್ಟಣ ಬೊಂಬೆಗಳ ತವರು ಎಂದೇ ಕರೆಸಿಕೊಂಡಿದೆ. ಬೊಂಬೆಗಳ ಉದ್ಯಮವನ್ನೇ ಅವಲಂಬಿಸಿದ 3200 ಕುಶಲಕರ್ಮಿಗಳಿದ್ದು, 400ರಿಂದ 500 ಮಂದಿ ಪರಿಣತರೂ ಇದ್ದಾರೆ. ಉದ್ಯಮವನ್ನು ನೇರ ಮತ್ತು ಪರೋಕ್ಷವಾಗಿ 10 ಸಾವಿರಕ್ಕೂ ಅಧಿಕ ಮಂದಿ ಅವಲಂಬಿಸಿದ್ದಾರೆ. 1985ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡಚ್‌ ಸರ್ಕಾರದ ನೆರವಿನಿಂದ ಕಲಾನಗರ ಬಡಾವಣೆಯನ್ನು ನಿರ್ಮಿಸಿವೆ. ಚನ್ನಪಟ್ಟಣದಲ್ಲಿ ಸಾವಿರಕ್ಕೂ ಹೆಚ್ಚು ಬಗೆಯ ಬೊಂಬೆಗಳು ಸಿದ್ಧವಾಗುತ್ತವೆ. 10 ರೂ. ನಿಂದ 1000 ರೂ. ವರೆಗಿನ ಬೊಂಬೆಗಳೂ ಲಭ್ಯ. 450 ಬಗೆಯ ಬೊಂಬೆಗಳಿಗೆ ಹೆಚ್ಚು ಬೇಡಿಕೆ. ಗುಲಗಂಜಿ ಗಾತ್ರದ ಬೊಂಬೆ ಕೆತ್ತನೆಯಲ್ಲೂ ಇಲ್ಲಿನ ಕುಶಲಕರ್ಮಿಗಳು ನಿಪುಣರು.

ಚೀನಾ ಬೊಂಬೆಗಳ ಆಕ್ರಮಣ ತಡೆಯಬಲ್ಲದೇ?

ದಶಕಗಳಿಂದೀಚೆ ಚೀನಾ ಗೊಂಬೆ, ಪ್ಲಾಸ್ಟಿಕ್‌ ಗೊಂಬೆ, ಪಿಂಗಾಣಿ ಆಟಿಕೆ- ಅಲಂಕಾರಿಕ ಆಟಿಕೆಗಳ ದಾಳಿಯಿಂದ ಬೊಂಬೆ ಉದ್ಯಮ ಸಂಕಷ್ಟಕ್ಕೆ ಒಳಗಾಗಿದೆ. ಚೀನಾದ ಬೊಂಬೆಗಳು ಅಗ್ಗದ ಬೆಲೆಗಳಿಗೆ ಲಭ್ಯವಾಗುತ್ತಿವೆ. ಆದರೆ, ವಿವಿಧ ಕೆಮಿಕಲ್ಸ್‌ಗಳನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ. ಹೀಗಾಗಿ ಚೀನಾದ ಬಹುತೇಕ ಬೊಂಬೆಗಳು ವಿಷಕಾರಿಯಾಗಿವೆ. ಆದರೂ, ಚನ್ನಪಟ್ಟಣ ಬೊಂಬೆ ಮಾರಾಟ ಮಳಿಗೆಗಳಲ್ಲಿಯೇ ಚೀನಾದ ಬೊಂಬೆಗಳು ಮಾರಾಟವಾಗುತ್ತಿವೆ. ಚೀನಾ ರೇಷ್ಮೆಯಂತೆಯೇ ಅಲ್ಲಿನ ಬೊಂಬೆಗಳೂ ಈ ಭಾಗದ ಜನರನ್ನು ಸಂಕಷ್ಟಕ್ಕೆ ತಳ್ಳಿವೆ.ಈ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಲು ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡಿರುವ ಕುಶಲಕರ್ಮಿಗಳು ಸಾಂಪ್ರದಾಯಿಕ ಬೊಂಬೆಗಳ ಜತೆಜತೆಗೇ ಗೃಹಾಲಂಕಾರಿ ವಸ್ತು, ನಿತ್ಯ ಬಳಕೆಯ ಪದಾರ್ಥಗಳು, ಮರದ ಆಭರಣ, ಪೀಠೊಪಕರಣ, ಕಾರ್ಪೊರೇಟ್‌ ಗಿಫ್ಟ್, ತಯಾರಿಕೆ ಮೂಲಕ ತಮ್ಮ ಅಸ್ತಿವನ್ನು ಉಳಿಸಿಕೊಳ್ಳುವ ಯತ್ನ ಮಾಡುತ್ತಿದ್ದಾರೆ. ಮಾರುಕಟ್ಟೆ ವಿಸ್ತರಿಸಲೂ ಯತ್ನಿಸುತ್ತಿದ್ದಾರೆ.

ಬಗೆಬಗೆಯ ಬೊಂಬೆಗಳು!

ಬಣ್ಣದ ಬುಗುರಿ, ಆಕರ್ಷಕ ರೈಲು ವಿಶ್ವಪ್ರಸಿದ್ಧ. ಇದನ್ನೇ ಮಿಶೆಲ್‌ ಒಬಾಮಾ ಖರೀದಿಸಿದ್ದು! ಅಲ್ಲದೆ, ದಿಬ್ಬಣ ಬ್ಯಾಂಡ್‌ ಸಟ್‌, ದಸರಾ ಬೊಂಬೆ, ದೇವರ ಗೋಪುರ ಪ್ರಾಣಿಪಕ್ಷಿಗಳ ಮಾದರಿ, ನರ್ತಿಸುವ ಗೊಂಬೆ, ಮರದ ಕೀ ಬಂಚ್‌, ಕಿವಿಯೋಲೆ, ಬಳೆ, ನೆಕ್ಲೆಸ್‌, ಚೂಡಿದಾರದ ಮೇಲೆ ಬಳಸುವ ಅಲಂಕಾರದ ವಸ್ತುಗಳು ಇಲ್ಲಿ ತಯಾರಾಗುತ್ತವೆ. ಜೀಕುವ ಆಟದ ಕುದುರೆ, ಕ್ರಿಸ್‌ಮಸ್‌ ಗಿಡ, ಎತ್ತಿನ ಬಂಡಿ ಮಕ್ಕಳನ್ನು ಆಕರ್ಷಿಸುತ್ತವೆ. ಗ್ರಾಹಕರಿಗೆ ಬೇಕಾದಂತ ಬೊಂಬೆ ಮತ್ತು ಪದಾರ್ಥಗಳನೂ ಇಲ್ಲಿನ ಕುಶಲಕರ್ಮಿಗಳು ತಯಾರಿಸಿಕೊಡುತ್ತಾರೆ.

ನೂರಾರು ಕೋಟಿ ರೂ. ವಹಿವಾಟು:

ಪ್ರಾದೇಶಿಕ ಮಾರುಕಟ್ಟೆಯಲ್ಲಿ ಬೊಂಬೆಗಳ ವಾರ್ಷಿಕ ವಹಿವಾಟು 50 ರಿಂದ 60 ಕೋಟಿ ರೂ. ಇದ್ದರೆ. ಡೀಮ್ಡ್ ಎಕ್ಸ್‌ಪೋರ್ಟ್‌ (ವಿವಿಧ ದೇಶಗಳಿಗೆ ರಫ್ತು ಮಾಡುವ ಏಜನ್ಸಿ)ಗಳ ವಹಿವಾಟು 100 ಕೋಟಿ ರೂ. ಮೀರಿದೆ. ಹಲವು ಕಾರ್ಪೊರೇಟ್‌ ಸಂಸ್ತೆಗಳೂ ಮಾದರಿ ಉಡುಗೊರೆಗಳನ್ನು ಖರೀದಿಸುತ್ತವೆ. ಅಮೆರಿಕ, ಜಪಾನ್‌, ಜರ್ಮನಿ, ಫ್ರಾನ್ಸ್‌, ಇಂಗ್ಲೆಂಡ್‌, ಮಲೇಷಿಯಾ ಸೇರಿದಂತೆ ಹಲವೆಡೆಗೆ ಇಲ್ಲಿನ ಚನ್ನಪಟ್ಟಣದ ಬೊಂಬೆಗಳು ಮತ್ತು ಅಲಂಕಾರಿಕ ವಸ್ತುಗಳು ರಫ್ತಾಗುತ್ತಿದೆ. ವಿದೇಶಿ ವಿನಿಮಯವೂ ಸಣ್ಣ ಪ್ರಮಾಣದಲ್ಲಿ ಹರಿದು ಬರುತ್ತಿದೆ.

ಗಣ್ಯರ ನಿಮಾಸದಲ್ಲಿ ಸ್ಥಾನ!

ಇಂಗ್ಲೆಂಡ್‌ ರಾಣಿಯ ಅರಮನೆ, ಶ್ರೀಲಂಕಾದ ಪ್ರಧಾನಿ ನಿವಾಸ ಸೇರಿದಂತೆ ದೇಶವಿದೇಶದ ಗಣ್ಯರ ಮನೆಯಲ್ಲಿ ಈ ಬೊಂಬೆಗಳು ಅಲಂಕಾರದ ಸ್ಥಾನಪಡೆದಿವೆ. ಬ್ರಿಟನ್‌ರಾಣಿ ಡಯಾನಾ ಮತ್ತು ದೊರೆ ಚಾರ್ಲ್ಸ್‌ ವಿವಾಹಕ್ಕೆ ಪೌಡರ್‌ ಬಾಕ್ಸ್‌ಗಳು ಚನ್ನಪಟ್ಟಣದಿಂದ ರವಾನೆಯಾಗಿದ್ದವು. ಶ್ರೀಲಂಕಾ ಪ್ರಧಾನಿಯಾಗಿದ್ದ ಭಂಡಾರು ನಾಯಕೆ ಅವರು ಚನ್ನಪಟ್ಟಣಕ್ಕೆ ಭೇಟಿ ನೀಡಿ ಕೆಲವು ಬೊಂಬೆಗಳನ್ನು ಖರೀದಿಸಿ ಹೋಗಿದ್ದರು.

ಚನ್ನಪಟ್ಟಣ ಟು ಶ್ವೇತಭವನ!

2010ರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಕುಟುಂಬ ಸಮೇತ ಭಾರತ ಪ್ರವಾಸ ಕೈಗೊಂಡಿದ್ದಾಗ ದೆಹಲಿಯ ವಸ್ತಪ್ರದರ್ಶನದಲ್ಲಿ ಚನ್ನಪಟ್ಟಣದ ಬೊಂಬೆಗಳನ್ನು ಕಂಡು ಕಣ್ಣರಳಿಸಿದ್ದರು. ಕೆಲವುಬೊಂಬೆಗಳನ್ನು ಖರೀದಿಸಿದ್ದರು. ಹೀಗೆ ಚನ್ನಪಟ್ಟಣಗೊಂಬೆಗಳು ಶ್ವೇತಭವನ್ನು ತಲುಪಿದವು.

ಅಂತರ್ಜಾಲದಲ್ಲೂ ಮಾರಾಟ:

ಚನ್ನಪಟ್ಟಣ ಗೊಂಬೆಗಳು ಕೇವಲ ಮಾರುಕಟ್ಟೆ ವ್ಯಾಪಾರಕ್ಕೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ನಿಧಾನವಾಗಿ ಅಂತರ್ಜಾಲದಲ್ಲೂ ಸದ್ದು ಮಾಡಲು ಆರಂಭಿಸಿವೆ. ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ಪ್ರಾಧಿಕಾರ ( (ಕೆಎಸ್‌ಎಚ್‌ಡಿಸಿ)ಚನ್ನಪಟ್ಟಣ ಬೊಂಬೆಗಳ ಮಾರಾಟಕ್ಕೆ ತನ್ನದೇ ಆದ ಆನ್‌ಲೈನ್‌ ಜಾಲತಾಣವನ್ನು ನಿರ್ಮಿಸಿದೆ. ಅಲ್ಲದೆ, ಎನ್‌ಜಿಒಗಳೂ ಚನ್ನಪಟ್ಟಣಗೊಂಬೆಗಳನ್ನು ಖರೀದಿಸಿ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿವೆ.

ಕೆಎಸ್‌ಎಚ್‌ಡಿಸಿಯ ವಾರ್ಷಿಕ ವಹಿವಾಟು
2011-12 47.27 ಲಕ್ಷ ರೂ.
2012-13 64.71 ಲಕ್ಷ ರೂ.
2013-14 69.34 ಲಕ್ಷ ರೂ.

ಆಕರ: ಉದಯವಾಣಿ ಪತ್ರಿಕೆ

Monday, February 8, 2016

೬೪ ವಿದ್ಯೆಗಳು

ಅರವತ್ತನಾಲ್ಕು ವಿದ್ಯೆಗಳ ಪಟ್ಟಿ.
೧.ವೇದ
೨.ವೇದಾಂಗ
೩.ಇತಿಹಾಸ
೪.ಆಗಮ
೫.ನ್ಯಾಯ
೬.ಕಾವ್ಯ
೭.ಅಲಂಕಾರ
೮.ನಾಟಕ
೯.ಗಾನ
೧೦.ಕವಿತ್ವ
೧೧.ಕಾಮಶಾಸ್ತ್ರ
೧೨.ದೂತನೈಪುಣ್ಯ
೧೩.ದೇಶಭಾಷಾಜ್ಞಾನ
೧೪.ಲಿಪಿಕರ್ಮ
೧೫.ವಾಚನ
೧೬.ಸಮಸ್ತಾವಧಾನ
೧೭.ಸ್ವರಪರೀಕ್ಷಾ
೧೮.ಶಾಸ್ತ್ರಪರೀಕ್ಷಾ
೧೯.ಶಕುನಪರೀಕ್ಷಾ
೨೦.ಸಾಮುದ್ರಿಕಪರೀಕ್ಷಾ
೨೧.ರತ್ನಪರೀಕ್ಷಾ
೨೨.ಸ್ವರ್ಣಪರೀಕ್ಷಾ
೨೩.ಗಜಲಕ್ಷಣ
೨೪.ಅಶ್ವಲಕ್ಷಣ
೨೫.ಮಲ್ಲವಿದ್ಯಾ
೨೬.ಪಾಕಕರ್ಮ
೨೭.ದೋಹಳ
೨೮.ಗಂಧವಾದ
೨೯.ಧಾತುವಾದ
೩೦.ಖನಿವಾದ
೩೧.ರಸವಾದ
೩೨.ಅಗ್ನಿಸ್ತಂಭ
೩೩.ಜಲಸ್ತಂಭ
೩೪.ವಾಯುಸ್ತಂಭ
೩೫.ಖಡ್ಗಸ್ತಂಭ
೩೬.ವಶ್ಯಾ
೩೭.ಆಕರ್ಷಣ
೩೮.ಮೋಹನ
೩೯.ವಿದ್ವೇಷಣ
೪೦.ಉಚ್ಛಾಟನ
೪೧.ಮಾರಣ
೪೨.ಕಾಲವಂಚನ
೪೩.ವಾಣಿಜ್ಯ
೪೪.ಪಶುಪಾಲನ
೪೫.ಕೃಷಿ
೪೬.ಸಮಶರ್ಮ
೪೭.ಲಾವುಕಯುದ್ಧ
೪೮.ಮೃಗಯಾ
೪೯.ಪುತಿಕೌಶಲ
೫೦.ದೃಶ್ಯಶರಣಿ
೫೧.ದ್ಯೂತಕರಣಿ
೫೨.ಚಿತ್ರಲೋಹ, ಪಾರ್ಷಾಮೃತ್, ದಾರು ವೇಣು ಚರ್ಮ ಅಂಬರ
ಕ್ರಿಯ
೫೩.ಚೌರ್ಯ
೫೪.ಔಷಧಸಿದ್ಧಿ
೫೫.ಮಂತ್ರಸಿದ್ಧಿ
೫೬.ಸ್ವರವಂಚನಾ
೫೭.ದೃಷ್ಟಿವಂಚನಾ
೫೮.ಅಂಜನ
೫೯.ಜಲಪ್ಲವನ
೬೦.ವಾಕ್ ಸಿದ್ಧಿ
೬೧.ಘಟಿಕಾಸಿದ್ಧಿ
೬೨.ಪಾದುಕಾಸಿದ್ಧಿ
೬೩.ಇಂದ್ರಜಾಲ
೬೪.ಮಹೇಂದ್ರಜಾಲ
🙏🙏🙏🌞🌞🌞🌞🌞🌞
Pls share👏🏾👏🏾👏🏾👏🏾👏🏾👏🏾👏🏾👏🏾🌹

Monday, January 26, 2015

ಚನ್ನಪಟ್ಟಣ ಬೊಂಬೆ ಕಥೆ ಕೇಳಿ!

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿರುವ ಈ ಬಾರಿಯ ಗಣರಾಜ್ಯೋತ್ಸವದ ಪೆರೇಡ್ನಲ್ಲಿ ಕರ್ನಾಟಕದ ಚನ್ನಪಟ್ಟಣ ಬೊಂಬೆಗಳ ಸ್ತಬ್ಧ ಚಿತ್ರ ಪ್ರದರ್ಶನಗೊಳ್ಳಲಿದೆ. ಆದರೆ, ಚನ್ನಪಟ್ಟಣ ಗೊಂಬೆಗಳ ಹಿಂದೆ 200 ವರ್ಷಗಳ ಇತಿಹಾಸವಿದೆ. ಮೈಸೂರು ಹುಲಿ ಟಿಪ್ಪು ಸುಲ್ತಾನ್ ಪರಿಚಯಿಸಿದ ಈ ಕಲೆ ಇಂದು ದೇಶ- ವಿದೇಶಗಳಲ್ಲಿ ತನ್ನ ಚೆಲುವಿನ ಕಂಪು ಬೀರುತ್ತಿವೆ. ಚನ್ನಪಟ್ಟಣ ಬೊಂಬೆಗಳು ಅಮೆರಿಕದ ಶ್ವೇತ ಭವನದಲ್ಲೂ ಸ್ಥಾನ ಪಡೆದಿವೆ. ಈ ಬೊಂಬೆಗಳ ಮೇಲೆ ಅಪಾರ ಒಲವು ಬೆಳೆಸಿಕೊಂಡಿವ ಮೆಶೆಲ್ ಒಬಾಮಾ ಅವರಿಗೆ ಪ್ರೀತಿಯ ಧೊÂàತಕವಾಗಿ ಸಾಂಪ್ರದಾಯಿಕ ಕಲೆಯಲ್ಲಿ ಕೆತ್ತಿದ ಚನ್ನಪಟ್ಟಣದಗೊಂಬೆಗಳನ್ನೇ ನೀಡಲಾಗುತ್ತಿದೆ. 
ಹೀಗಾಗಿ ಬೊಂಬೆಗಳ ಇತಿಹಾಸದ ಮೇಲೆ ಕಣ್ಣುಹಾಸಿದಾಗ..... ಟಿಪ್ಪು ಸುಲ್ತಾನ್ ಪರಿಚಯಿಸಿದ ಪರಂಪರೆ! ಚನ್ನಪಟ್ಟಣ ಗೊಂಬೆ ಉದ್ಯಮಕ್ಕೆ ಸುಮಾರು 200 ವರ್ಷಗಳ ಇತಹಾಸವಿದೆ. ಮೈಸೂರು ಹುಲಿ ಟಿಪ್ಪು ಸುಲ್ತಾನ್ ಈ ಉದ್ಯಮದ ಕಾರಣಕರ್ತರು. 1759-1799ರಲ್ಲಿ ಪರ್ಷಿಯಾ ದೇಶದ ಕುಶಲಕರ್ಮಿಗಳನ್ನು ಕರೆಸಿ ರಾಮನಗರದ ಚನ್ನಪಟ್ಟಣದ ಜನತೆ ಬೊಂಬೆಯನ್ನು ನಿರ್ಮಿಸುವ ಕಲೆ ತಿಳಿಸಿಕೊಟ್ಟಿದ್ದರಿಂದ ಬೊಂಬೆ ಉದ್ಯಮ ಬೆಳೆಯಿತು. ನಂತರ ಇಲ್ಲಿನ ಬಾಬಾ ಸಾಹೇಬ್ಮಿಯಾ ಎಂಬ ಕುಶಲಕರ್ಮಿ ಆಧುನಿಕ ವಿಧಾನದ ಬೊಂಬೆ ಕೆತ್ತನೆಯ ಬಗ್ಗೆ ತಿಳಿದುಕೊಂಡು ಬಂದರು. ಬಳಿಕ ಮೈಸೂರು ದಿವಾನರಿಗೆ ತಮ್ಮ ಕಲೆಯ ಬಗ್ಗೆ ತಿಳಿಸಿದರು. ಇದರಿಂದಪ್ರೇರೇಪಿತರಾದ ಮೈಸೂರು ದಿವಾನರು 1902ರಲ್ಲಿ ಚನ್ನಪಟ್ಟಣ ಕುಶಲಕರ್ಮಿ ತರಬೇತಿ ಸಂಸ್ಥೆ ಆರಂಭಿಸಿದರು. ಇಲ್ಲಿ ಅರಗು, ಬಣ್ಣ, ತೆಂಗಿನ ನಾರಿನ ಬೊಂಬೆಗಳ ತಯಾರಿಗಳ ಕುರಿತು ತರಬೇತಿ ನೀಡಲಾಗುತ್ತಿತ್ತು. ಕಾಲ ಕಳೆದಂತೆ ಬೊಂಬೆಗಳ ತಯಾರಿ ಬದಲಾವಣೆ ಗೊಂಡಿತು. 
ಆನೆಯ ದಂತ ಮತ್ತು ಮರಗಳನ್ನು ಬಳಸಿ ಸಾಂಪ್ರದಾಯಿಕ ಬೊಂಬೆಗಳನ್ನು ತಯಾರಿಸುವ ಕಲೆ ಬೆಳೆದುಬಂದಿದೆ. ಇಂದು ಗಂಧದ ಮರ, ಆಲೆ, ರಬ್ಬರ್, ಪೈನ್, ತೇಗದಮರಗಳನ್ನು ಬೊಂಬೆಗಳ ತಯಾರಿಕೆಗೆ ಹೆಚ್ಚಾಗಿ ಬಳಸಲಾಗುತ್ತಿದೆ. ಬೊಂಬೆಗಳ ತವರು ಚನ್ನಪಟ್ಟಣ: ಚನ್ನಪಟ್ಟಣ ಬೊಂಬೆಗಳ ತವರು ಎಂದೇ ಕರೆಸಿಕೊಂಡಿದೆ. ಬೊಂಬೆಗಳ ಉದ್ಯಮವನ್ನೇ ಅವಲಂಬಿಸಿದ 3200 ಕುಶಲಕರ್ಮಿಗಳಿದ್ದು, 400ರಿಂದ 500 ಮಂದಿ ಪರಿಣತರೂ ಇದ್ದಾರೆ. ಉದ್ಯಮವನ್ನು ನೇರ ಮತ್ತು ಪರೋಕ್ಷವಾಗಿ 10 ಸಾವಿರಕ್ಕೂ ಅಧಿಕ ಮಂದಿ ಅವಲಂಬಿಸಿದ್ದಾರೆ. 1985ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡಚ್ ಸರ್ಕಾರದ ನೆರವಿನಿಂದ ಕಲಾನಗರ ಬಡಾವಣೆಯನ್ನು ನಿರ್ಮಿಸಿವೆ.
 ಚನ್ನಪಟ್ಟಣದಲ್ಲಿ ಸಾವಿರಕ್ಕೂ ಹೆಚ್ಚು ಬಗೆಯ ಬೊಂಬೆಗಳು ಸಿದ್ಧವಾಗುತ್ತವೆ. 10 ರೂ. ನಿಂದ 1000 ರೂ. ವರೆಗಿನ ಬೊಂಬೆಗಳೂ ಲಭ್ಯ. 450 ಬಗೆಯ ಬೊಂಬೆಗಳಿಗೆ ಹೆಚ್ಚು ಬೇಡಿಕೆ. ಗುಲಗಂಜಿ ಗಾತ್ರದ ಬೊಂಬೆ ಕೆತ್ತನೆಯಲ್ಲೂ ಇಲ್ಲಿನ ಕುಶಲಕರ್ಮಿಗಳು ನಿಪುಣರು. ಚೀನಾ ಬೊಂಬೆಗಳ ಆಕ್ರಮಣ ತಡೆಯಬಲ್ಲದೇ? ದಶಕಗಳಿಂದೀಚೆ ಚೀನಾ ಗೊಂಬೆ, ಪ್ಲಾಸ್ಟಿಕ್ ಗೊಂಬೆ, ಪಿಂಗಾಣಿ ಆಟಿಕೆ- ಅಲಂಕಾರಿಕ ಆಟಿಕೆಗಳ ದಾಳಿಯಿಂದ ಬೊಂಬೆ ಉದ್ಯಮ ಸಂಕಷ್ಟಕ್ಕೆ ಒಳಗಾಗಿದೆ. ಚೀನಾದ ಬೊಂಬೆಗಳು ಅಗ್ಗದ ಬೆಲೆಗಳಿಗೆ ಲಭ್ಯವಾಗುತ್ತಿವೆ. ಆದರೆ, ವಿವಿಧ ಕೆಮಿಕಲ್ಸ್ಗಳನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ. ಹೀಗಾಗಿ ಚೀನಾದ ಬಹುತೇಕ ಬೊಂಬೆಗಳು ವಿಷಕಾರಿಯಾಗಿವೆ. ಆದರೂ, ಚನ್ನಪಟ್ಟಣ ಬೊಂಬೆ ಮಾರಾಟ ಮಳಿಗೆಗಳಲ್ಲಿಯೇ ಚೀನಾದ ಬೊಂಬೆಗಳು ಮಾರಾಟವಾಗುತ್ತಿವೆ. ಚೀನಾ ರೇಷ್ಮೆಯಂತೆಯೇ ಅಲ್ಲಿನ ಬೊಂಬೆಗಳೂ ಈ ಭಾಗದ ಜನರನ್ನು ಸಂಕಷ್ಟಕ್ಕೆ ತಳ್ಳಿವೆ.ಈ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಲು ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡಿರುವ ಕುಶಲಕರ್ಮಿಗಳು ಸಾಂಪ್ರದಾಯಿಕ ಬೊಂಬೆಗಳ ಜತೆಜತೆಗೇ ಗೃಹಾಲಂಕಾರಿ ವಸ್ತು, ನಿತ್ಯ ಬಳಕೆಯ ಪದಾರ್ಥಗಳು, ಮರದ ಆಭರಣ, ಪೀಠೊಪಕರಣ, ಕಾರ್ಪೊರೇಟ್ ಗಿಫ್ಟ್, ತಯಾರಿಕೆ ಮೂಲಕ ತಮ್ಮ ಅಸ್ತಿವನ್ನು ಉಳಿಸಿಕೊಳ್ಳುವ ಯತ್ನ ಮಾಡುತ್ತಿದ್ದಾರೆ. ಮಾರುಕಟ್ಟೆ ವಿಸ್ತರಿಸಲೂ ಯತ್ನಿಸುತ್ತಿದ್ದಾರೆ. ಬಗೆಬಗೆಯ ಬೊಂಬೆಗಳು! ಬಣ್ಣದ ಬುಗುರಿ, ಆಕರ್ಷಕ ರೈಲು ವಿಶ್ವಪ್ರಸಿದ್ಧ. ಇದನ್ನೇ ಮಿಶೆಲ್ ಒಬಾಮಾ ಖರೀದಿಸಿದ್ದು! ಅಲ್ಲದೆ, ದಿಬ್ಬಣ ಬ್ಯಾಂಡ್ ಸಟ್, ದಸರಾ ಬೊಂಬೆ, ದೇವರ ಗೋಪುರ ಪ್ರಾಣಿಪಕ್ಷಿಗಳ ಮಾದರಿ, ನರ್ತಿಸುವ ಗೊಂಬೆ, ಮರದ ಕೀ ಬಂಚ್, ಕಿವಿಯೋಲೆ, ಬಳೆ, ನೆಕ್ಲೆಸ್, ಚೂಡಿದಾರದ ಮೇಲೆ ಬಳಸುವ ಅಲಂಕಾರದ ವಸ್ತುಗಳು ಇಲ್ಲಿ ತಯಾರಾಗುತ್ತವೆ. ಜೀಕುವ ಆಟದ ಕುದುರೆ, ಕ್ರಿಸ್ಮಸ್ ಗಿಡ, ಎತ್ತಿನ ಬಂಡಿ ಮಕ್ಕಳನ್ನು ಆಕರ್ಷಿಸುತ್ತವೆ. ಗ್ರಾಹಕರಿಗೆ ಬೇಕಾದಂತ ಬೊಂಬೆ ಮತ್ತು ಪದಾರ್ಥಗಳನೂ ಇಲ್ಲಿನ ಕುಶಲಕರ್ಮಿಗಳು ತಯಾರಿಸಿಕೊಡುತ್ತಾರೆ.
 channapattana bombe kathe keli!
ನೂರಾರು ಕೋಟಿ ರೂ. ವಹಿವಾಟು: ಪ್ರಾದೇಶಿಕ ಮಾರುಕಟ್ಟೆಯಲ್ಲಿ ಬೊಂಬೆಗಳ ವಾರ್ಷಿಕ ವಹಿವಾಟು 50 ರಿಂದ 60 ಕೋಟಿ ರೂ. ಇದ್ದರೆ. ಡೀಮ್ಡ್ ಎಕ್ಸ್ಪೋರ್ಟ್ (ವಿವಿಧ ದೇಶಗಳಿಗೆ ರಫ್ತು ಮಾಡುವ ಏಜನ್ಸಿ)ಗಳ ವಹಿವಾಟು 100 ಕೋಟಿ ರೂ. ಮೀರಿದೆ. ಹಲವು ಕಾರ್ಪೊರೇಟ್ ಸಂಸ್ತೆಗಳೂ ಮಾದರಿ ಉಡುಗೊರೆಗಳನ್ನು ಖರೀದಿಸುತ್ತವೆ. ಅಮೆರಿಕ, ಜಪಾನ್, ಜರ್ಮನಿ, ಫ್ರಾನ್ಸ್, ಇಂಗ್ಲೆಂಡ್, ಮಲೇಷಿಯಾ ಸೇರಿದಂತೆ ಹಲವೆಡೆಗೆ ಇಲ್ಲಿನ ಚನ್ನಪಟ್ಟಣದ ಬೊಂಬೆಗಳು ಮತ್ತು ಅಲಂಕಾರಿಕ ವಸ್ತುಗಳು ರಫ್ತಾಗುತ್ತಿದೆ. ವಿದೇಶಿ ವಿನಿಮಯವೂ ಸಣ್ಣ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಗಣ್ಯರ ನಿಮಾಸದಲ್ಲಿ ಸ್ಥಾನ! ಇಂಗ್ಲೆಂಡ್ ರಾಣಿಯ ಅರಮನೆ, ಶ್ರೀಲಂಕಾದ ಪ್ರಧಾನಿ ನಿವಾಸ ಸೇರಿದಂತೆ ದೇಶವಿದೇಶದ ಗಣ್ಯರ ಮನೆಯಲ್ಲಿ ಈ ಬೊಂಬೆಗಳು ಅಲಂಕಾರದ ಸ್ಥಾನಪಡೆದಿವೆ. 
ಬ್ರಿಟನ್ರಾಣಿ ಡಯಾನಾ ಮತ್ತು ದೊರೆ ಚಾರ್ಲ್ಸ್ ವಿವಾಹಕ್ಕೆ ಪೌಡರ್ ಬಾಕ್ಸ್ಗಳು ಚನ್ನಪಟ್ಟಣದಿಂದ ರವಾನೆಯಾಗಿದ್ದವು. ಶ್ರೀಲಂಕಾ ಪ್ರಧಾನಿಯಾಗಿದ್ದ ಭಂಡಾರು ನಾಯಕೆ ಅವರು ಚನ್ನಪಟ್ಟಣಕ್ಕೆ ಭೇಟಿ ನೀಡಿ ಕೆಲವು ಬೊಂಬೆಗಳನ್ನು ಖರೀದಿಸಿ ಹೋಗಿದ್ದರು. ಚನ್ನಪಟ್ಟಣ ಟು ಶ್ವೇತಭವನ! 2010ರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಕುಟುಂಬ ಸಮೇತ ಭಾರತ ಪ್ರವಾಸ ಕೈಗೊಂಡಿದ್ದಾಗ ದೆಹಲಿಯ ವಸ್ತಪ್ರದರ್ಶನದಲ್ಲಿ ಚನ್ನಪಟ್ಟಣದ ಬೊಂಬೆಗಳನ್ನು ಕಂಡು ಕಣ್ಣರಳಿಸಿದ್ದರು. ಕೆಲವುಬೊಂಬೆಗಳನ್ನು ಖರೀದಿಸಿದ್ದರು. ಹೀಗೆ ಚನ್ನಪಟ್ಟಣಗೊಂಬೆಗಳು ಶ್ವೇತಭವನ್ನು ತಲುಪಿದವು. ಅಂತರ್ಜಾಲದಲ್ಲೂ ಮಾರಾಟ: ಚನ್ನಪಟ್ಟಣ ಗೊಂಬೆಗಳು ಕೇವಲ ಮಾರುಕಟ್ಟೆ ವ್ಯಾಪಾರಕ್ಕೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ನಿಧಾನವಾಗಿ ಅಂತರ್ಜಾಲದಲ್ಲೂ ಸದ್ದು ಮಾಡಲು ಆರಂಭಿಸಿವೆ. ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ಪ್ರಾಧಿಕಾರ ( (ಕೆಎಸ್‌ಎಚ್ಡಿಸಿ)ಚನ್ನಪಟ್ಟಣ ಬೊಂಬೆಗಳ ಮಾರಾಟಕ್ಕೆ ತನ್ನದೇ ಆದ ಆನ್ಲೈನ್ ಜಾಲತಾಣವನ್ನು ನಿರ್ಮಿಸಿದೆ. ಅಲ್ಲದೆ, ಎನ್ಜಿಒಗಳೂ ಚನ್ನಪಟ್ಟಣಗೊಂಬೆಗಳನ್ನು ಖರೀದಿಸಿ ಆನ್ಲೈನ್ನಲ್ಲಿ ಮಾರಾಟ ಮಾಡುತ್ತಿವೆ. ಕೆಎಸ್‌ಎಚ್ಡಿಸಿಯ ವಾರ್ಷಿಕ ವಹಿವಾಟು 2011-12 47.27 ಲಕ್ಷ ರೂ. 2012-13 64.71 ಲಕ್ಷ ರೂ. 2013-14 69.34 ಲಕ್ಷ ರೂ.


source : prajavani

Sunday, December 14, 2014

ಜಾನಪದ ಲೋಕ

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಾಮನಗರದಿಂದ 8 ಕಿ.ಮೀ. ದೂರದಲ್ಲಿ ಬಲಗಡೆಗೆ 15 ಎಕರೆ ವಿಶಾಲವಾದ ಜಾಗದಲ್ಲಿ ಜಾನಪದ ಲೋಕ ಸೃಷ್ಟಿಯಾಗಿದ್ದು, ಪ್ರವಾಸಿಗರನ್ನು ಜನಪದ ವಿಶೇಷತೆಗಳಿಂದ ಸ್ವಾಗತಿಸುತ್ತಿದೆ. ಮುಖ್ಯ ದ್ವಾರದಲ್ಲಿ ನಗುತ್ತಿರುವ ನಿಗಿ ನಿಗಿ ಸೂರ್ಯ ನಂದಿ ಧ್ವಜಗಳ ಮಧ್ಯೆ "ಬನ್ನಿ ಒಳ ಬನ್ನಿ" ಎನ್ನುತ್ತಾನೆ. 1994ರ ಮಾ.12ರಂದು ಆರಂಭವಾದ ಈ ವಿಸ್ಮಯ ಲೋಕ ಜಗತ್ತಿನ ಪ್ರಮುಖ ಸಾಂಸ್ಕೃತಿಕ ಲೋಕಗಳಲ್ಲೊಂದು ಎಂಬುದು ಕನ್ನಡಿಗ ಹೆಮ್ಮೆ. 'ಗಜಮುಖನೇ ಗಣಪತಿಯೇ ನಿನಗೆ ವಂದನೆ' ಎಂದೆನ್ನೆಲು ಅಲ್ಲೊಂದು ಪುಟ್ಟದಾದ, ಚೊಕ್ಕವಾದ ಗಣೇಶ ಮಂದಿರ. ಅನಂತರ ಅನಾವರಣಗೊಳ್ಳುತ್ತೆ ನಮ್ಮ ಮುಂದೊಂದು ಅನುಪಮ 'ಜಾನಪದ ಜಗತ್ತು'.ಅಚ್ಚರಿ ಮತ್ತು ಅಷ್ಟೇ ಹೆಮ್ಮೆ ಪಡಬಹುದಾದ ಮತ್ತೊಂದು ವಿಷಯವೆಂದರೆ ಜಾನಪದ ಕಲೆಗಳ ಬಗ್ಗೆ ಒಂದೇ ಸಮನೆ 1800 ಗಂಟೆಗಳ ಕಾಲ ಕುಳಿತು ನೋಡಬಹುದಾದಷ್ಟು ವಿಡಿಯೋ ಸಂಗ್ರಹವಿದೆ. ಸುಮಾರು 800 ಗಂಟೆಗಳಷ್ಟು ಬಿಡುವಿಲ್ಲದೇ ಕೇಳಬಹುದಾದಷ್ಟು ಧ್ವನಿಮುದ್ರಿಕೆಗಳ ಸಂಗ್ರಹವಿದೆ. ಇಲ್ಲಿ ವಿಡಿಯೋ ಥಿಯೇಟರ್ ಕೂಡ ಇದೆ.ಬಗಲಲ್ಲೆ ಒಂದು ಜಾನಪದ ಸಂಶೋಧನಾ ಕೇಂದ್ರವಿದ್ದು, ಸಂಬಂಧಪಟ್ಟ ಕಲೆಗಳಲ್ಲಿ ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ ಗಳನ್ನು ನಡೆಸಲಾಗುತ್ತಿದೆ.
ಜಾನಪದ ಸೊಗಡು ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಈ ಲೋಕದಲ್ಲಿ ನಡೆಸುತ್ತಿರುವ ಕೋರ್ಸ್ ಗಳು, ಸಾಹಸ ಮೆಚ್ಚುವಂಥದ್ದು. ಮಂಗಳವಾರ ಹೊರತುಪಡಿಸಿ ಮಿಕ್ಕೆಲ್ಲ ದಿನಗಳಂದು ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆವಿಗೂ ಚಟುವಟಿಕೆಯಿಂದಿರುವ ಈ ಕೆಂದ್ರದಲ್ಲಿ ಪ್ರತಿ ತಿಂಗಳ ಕೋನೆ ಭಾನುವಾರ ಹಲವಾರು ಜನಪದ ಕಲೆಗಳ ಪ್ರದರ್ಶನ ಇರುತ್ತದೆ. ಜಾನಪದ ಸಂಸ್ಕೃತಿ ಮೇಲೆ ಬೆಳಕು ಚೆಲ್ಲುವಂಥ ಈ ಕಾರ್ಯಕ್ರಮ ತಪ್ಪದೇ ವೀಕ್ಷಿಸುವ ಮನಸ್ಸು ಎಲ್ಲರದ್ದಾಗಲಿ.
200 ವರ್ಷಗಳ ಹಳೆಯ ಬಂಡಿ, ಜೇಡಿ ಮಣ್ಣಿನಿಂದಾದ ಮಡಕೆ, ಕುಡಿಕೆ, ದೀಪದ ಬುಡ್ಡಿಗಳು ಇಂದಿನ ಐಟಿ-ಬಿಟಿ ಮಂದಿ ಜೀವನ ಹಾಗೂ ಹಳ್ಳಿ ಜನರ ಝೀವನಕ್ಕೆ ಇರುವ ಅಜ-ಗಜಾಂತರ ವ್ಯತ್ಯಾಸದ ಬಗ್ಗೆ ಚಿಂತನೆ ಹಚ್ಚುತ್ತವೆಲೋಕಮಹಲ್, ಶಿಲ್ಪಮಾಳ,ಆಯಗಾರರ ಮಾಳ,ತೊಟ್ಟಿಮನೆ,ಕಂಬಗಳ ಮನೆ ಹೀಗೆ ಒಂದೊಂದು ವಸ್ತು ಸಂಗ್ರಹಾಗರಕ್ಕೆ ಒಂದೊಂದು ವಿಶ್ಇಷ್ಟ ಹೆಸರು.ದಾರಿ ದಿಕ್ಕು ತೋರಲು ಗೋಕುಲಾಷ್ಟಮಿ ಕೃಷ್ಣನ ಪಾದದ ಗುರುತು. ತೊಗಲು ಗೊಂಬೆ, ಆಯುಧಗಳು, ಮದುವೆ,ಸೀಮಂತ ಮುಂತಾದ ಶಾಸ್ತ್ರಗಳಲ್ಲಿ ಬಳಸುವ ವಸ್ತುಗಳು,ಜನಪದ ವಾದ್ಯಗಳು, ಆಟಿಕೆಗಳು, ವರ್ಣಚಿತ್ರಗಳು, ಗ್ರಾಮೀಣ ಕಸಬುಗಳ ಉಪಕರಣಗಳು, ತಾಳೆ ಗರಿಗಳು ಇನ್ನೂ ಮುಂತಾದ 500ಕ್ಕೂ ಹೆಚ್ಚು ಜಾನಪದ ಸಲಕರಣೆಗಳನ್ನು ಕಲಾತ್ಮಕವಾಗಿ ವೈಜ್ಞಾನಿಕವಾಗಿ ಜತನದಿಂದ ಕಾಪಾಡಲಾಗಿದೆ. ಇಲ್ಲಿ 1200 ವರ್ಷಗಳಿಗೂ ಹಳೆಯದಾದ ಶಾಸನ, ವೀರಗಲ್ಲು, ಲಿಪಿಗಳು ಕಾಣಸಿಗುತ್ತವೆ.
ಇಂದು ಎಕರೆ ಜಾಗದಲ್ಲಿ ನಿರ್ಮಿತವಾಗಿರುವ ಸ್ವಚ್ಛಂದ ಕೊಳ, ನೆಮ್ಮದಿಯಿಂದ ಈಜುತ್ತಿರುವ ಬಾತು ಕೋಳಿಗಳು, ಮತ್ತು ಮಕ್ಕಳಿಗಾಗಿ ದೋಣಿ ವಿಹಾರ 1000 ಜನ ಕುಳಿತುಕೊಳ್ಳಲು ಸಾಧ್ಯವಾಗುವಂಥ ಗ್ರೀಕ್ ಮಾದರಿಯ ರಂಗ ಮಂದಿರ, ಅಲ್ಲೆ ವಸ್ತುಗಳನ್ನು ತಯಾರು ಮಾಡುತ್ತಿರುವ ಕರಕುಶಲ ಕರ್ಮಿಗಳು, ತಮ್ಮಷ್ಟಕ್ಕೆ ತಾವೇ ಗೀಗಿ ಪದ ಹಾಡಿಕೊಳ್ಳುತ್ತಿರುವ ಜನಪದರು, ನೃತ್ಯಾಭ್ಯಾಸ ಮಾಡುತ್ತಿರುವ ಕಲಾವಿದರು ಎಲ್ಲರನ್ನೂ ಕಾಣಬಹುದು

Friday, November 14, 2014

Mallur, Karnataka

Dodda Mallur is a village in Channapatna Taluk in Bangalorerural district in the Indian state of Karnataka. Mallur is located on the banks of the river Kanva. The village is famous for its temples of Sri Aprameya Swamy and Ambegalu Krishna (crawling Krishna). It is approximately 60km from Bangalore in Bangalore-Mysore state highway. It is roughly 3km from Channapatna.
The idol of Ambegalu Navaneetha Krishna (crawling Krishna with butter in hand), is believed to be the only statue of Lord Sri Krishna in this pose. The famous Kriti (musical composition or song) "Jagadodharana Adisidale Yasode" was composed by most prominent composer of Carnatic music Purandaradasa in appreciation of the beauty of this idol.
Dodda Mallur is located between Bangalore and Mysore. Its 60km from Bangalore and approximately 80km from Mysore. It is 3km from Channapatna.
Transport: You can reach Channapatna by Bus and Train. From Channapatna, local autorickshaws and private vehicles transport travelers to Doddamallur.

The Brahmotsavam of Sri Aprameya Swamy happens to fall in the months of April/May of every year. The architecture of this temple is built in such a way that for this part of the year the sunrays at sunrise fall directly on the sanctum sanctorum (Garbhagudi of Sri Aprameya Swamy)

Saturday, March 15, 2014

ಪ್ರವಾಸೋದ್ಯಮ - ಚನ್ನಪಟ್ಟಣ

ಪ್ರವಾಸೋದ್ಯಮದ ಬಗ್ಗೆ ಸಂಕ್ಷಿಪ್ತ ಪರಿಚಯ:

       ಚನ್ನಪಟ್ಟಣ ನಗರವು ಬೆಂಗಳೂರಿನಿಂದ ಸುಮಾರು 50 ಕಿ.ಮೀ ಗಳ ಅಂತರದಲ್ಲಿರುತ್ತದೆ. ಚನ್ನಪಟ್ಟಣ ನಗರವು ಗೊಂಬೆಗಳ ನಗರವೆಂದು ಪ್ರಸಿದ್ಧಿಯೊಂದಿದ್ದು, ಮರದ ಗೊಂಬೆಗಳ ತಯಾರಿಕೆ ಮತ್ತು ಕರಕುಶಲತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆಯನ್ನು ಹೊಂದಿದೆ.
    ಚನ್ನಪಟ್ಟಣ ನಗರವನ್ನು ಮೊಟ್ಟ ಮೊದಲ ಬಾರಿಗೆ ತಿಮ್ಮಪ್ಪ ರಾಜ ಅರಸು ನಂತರ ಜಗದೇವರಾಜ್ ರವರು ತಮ್ಮ ಆಳ್ವಿಕೆಯನ್ನು ನಡೆಸಿದರು ನಂತರ ಚನ್ನಪಟ್ಟಣವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿ ಆಳ್ವಿಕೆ ನಡೆಸಿದ್ದರು.
ಈ ಕೆಳಕಂಡ ಸ್ಥಳಗಳು ಚನ್ನಪಟ್ಟಣ ನಗರದ ಸಮೀಪದಲ್ಲಿರುವ ಪ್ರಸಿದ್ಧ ಪ್ರವಾಸಿ ಸ್ಥಳಗಳಾಗಿವೆ.
1)      ಕಣ್ವ ಮಹರ್ಷಿ ಮಠ ಮತ್ತು ಬ್ರಾಹ್ಮಣ್ಯ ತೀರ್ಥರ ಬೃಂದಾವನ ಅಬ್ಬೂರು.
2)      ಕಣ್ವ ಜಲಾಶಯ         
3)       ಮಳೂರು ಅಪ್ರಮೇಯ ಸ್ವಾಮಿ ದೇವಸ್ಥಾನ, ದೊಡ್ಡಮಳೂರು.
4)       ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನ.
5)       ಇಗ್ಗಲೂರು ಅಣೆಕಟ್ಟೆ
6)       ಬೆಟ್ಟದ ತಿಮ್ಮಪ್ಪ ಬೇವೂರು.
ತಲುಪುವ ಮಾರ್ಗ
1)      ಕಣ್ವ ಮಹರ್ಷಿ ಮಠ ಮತ್ತು ಬ್ರಾಹ್ಮಣ್ಯ ತೀರ್ಥರ ಬೃಂದಾವನವು ಚನ್ನಪಟ್ಟಣ ನಗರದ ಕಣ್ವ ಜಲಾಶಯದಿಂದ 6 ಕಿ.ಮೀ ದೂರದಲ್ಲಿದೆ.
2)      ಕಣ್ವ ಜಲಾಶಯ ಚನ್ನಪಟ್ಟಣದಿಂದ 13 ಕಿ.ಮೀ ದೂರದಲ್ಲಿದೆ.
3)       ಮಳೂರು ಅಪ್ರಮೇಯ ಸ್ವಾಮಿ ದೇವಸ್ಥಾನವು ಚನ್ನಪಟ್ಟಣದಿಂದ 2 ಕಿ.ಮೀ ದೂರದಲ್ಲಿದ್ದು ಬೆಂಗಳೂರು ಮತ್ತು ಮೈಸೂರು ಹೆದ್ದಾರಿಯ ನಡೆವೆಯಲ್ಲಿದೆ.
4)      ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನವು ಬೆಂಗಳೂರಿನಿಂದ ಚನ್ನಪಟ್ಟಣಕ್ಕೆ ಬರುವ ಮಾರ್ಗದಲ್ಲಿದ್ದು, ಬೆಂಗಳೂರು ಮತ್ತು ಮೈಸೂರು ಹೆದ್ದಾರಿಯ ಬಳಿಯಿರುತ್ತದೆ.
5)      ಇಗ್ಗಲೂರು ಅಣೆಕಟ್ಟೆಯು ಚನ್ನಪಟ್ಟಣದಿಂದ 20 ಕಿ.ಮೀ ದೂರದಲ್ಲಿದೆ. ಸಂತೆಮೊಗೇನಹಳ್ಳಿ ಮತ್ತು ಅಕ್ಕೂರು ಮಾರ್ಗದ ಲ್ಲಿದೆ.
6)  ಬೆಟ್ಟದ ತಿಮ್ಮಪ್ಪ ದೇವಸ್ಥಾನವು ಚನ್ನಪಟ್ಟಣದಿಂದ 13 ಕಿ.ಮೀ ದೂರದಲ್ಲಿದೆ. ನಿಡಸಾಲೆಗೆ ಹೋಗುವ ಮಾರ್ಗದಲ್ಲಿದೆ.

ಮಳೂರಿನ ಅಂಬೆಗಾಲುಕೃಷ್ಣ

ಈ ಮುದ್ದು ಕೃಷ್ಣನನ್ನು ಕುರಿತು ಪುರಂದರದಾಸರು ಹಾಡಿದ ಗೀತೆಜಗದೋದ್ಧಾರನ ಆಡಿಸಿದಳೆಶೋದಾ
ಜಗದೋದ್ಧಾರನ (ಪ)

ಜಗದೋದ್ಧಾರನ ಮಗನೆಂದು ತಿಳಿಯುತ
ಸುಗುಣಾಂತ ರಂಗನ ಆಡಿಸಿದಳೆಶೋದೆ (ಅ ಪ)

ನಿಗಮಕೆ ಸಿಲುಕದ ಅಗಣಿತ ಮಹಿಮನ
ಮಗುಗಳ ಮಾಣಿಕ್ಯನ ಆಡಿಸಿದಳೆ ಯಶೋದೆ (1)

ಅಣೋರಣೀಯನ ಮಹತೋ ಮಹಿಮನ
ಅಪ್ರಮೇಯನ ಆಡಿಸಿದಳೆಶೋದಾ (2)

ಪರಮ ಪುರುಷನ ಪರವಾಸುದೇವನ
ಪುರಂದರ ವಿಠಲನ ಆಡಿಸಿದಳೆಶೋದಾ (3)

Friday, March 14, 2014

ಗಮಕಿ “ಗುಡ್ಡಣ್ಣ”

ಕರುನಾಡಿನ “ಗೊಂಬೆನಗರಿ” ಎನಿಸಿರುವ ಚನ್ನಪಟ್ಟಣ ಬಹುಮುಖಿ ಪ್ರತಿಭೆಗಳನ್ನು ತನ್ನ ಮಡಿಲಲ್ಲಿರಿಸಿಕೊಂಡಿದೆ. ಅಂತಹ ಪ್ರತಿಭೆಗಳಲ್ಲಿ ನಮ್ಮ ನಾಡಿನ ಜಾನಪದ ನೃತ್ಯ ಕಲಾಪ್ರಕಾರಗಳು ಮುಖ್ಯವಾದವುಗಳಾಗಿವೆ.ಅವುಗಳಲ್ಲಿ ಕತ್ತಿವರಸೆ, ಒನಕೆ ಕುಣಿತ, ವೀರಗಾಸೆ ಕುಣಿತ, ಪೂಜಾ ಕುಣಿತ, ವಿಶಿಷ್ಟ ತಮಟೆ ವಾದನ, ಕಂಬದ ಕುಣಿತ, ಮರಗಾಲು ಕುಣಿತ ಮುಖ್ಯವಾದವು. ಇದಿಷ್ಟೇ ಅಲ್ಲದೆ ಜಾನಪದ ಗಾಯಕರು, ಸೋಬಾನೆ ಹಾಡುಗಾರರು,ಗಮಕ ಕಲಾವಿದರು,ವಚನ ಗಾಯಕರು ಇಲ್ಲಿ ಆವಿರ್ಭವಿಸಿದ್ದಾರೆ. ಆದರೆ ಇಲ್ಲಿ ಇನ್ನು ಅನೇಕ ಕಲೆಗಳು, ಕಲಾರಾಧಕರು ಇದ್ದಾರೆ. ಇವರಲ್ಲಿ ವೇದಿಕೆಯೇರಿ ತಮ್ಮ ಕಲೆಯನ್ನು ಪ್ರದರ್ಶಿಸಿದವರೆಷ್ಟೋ ಇಲ್ಲದವರೆಷ್ಟೊ?
ಇಂತಿಪ್ಪ ಚನ್ನಪಟ್ಟಣ ಕಲೆಗಳ ಬೀಡೆ ಹೌದು. ಇಂತಹ ಕಲೆಯ ನೆಲೆಯಾದ ಈ ತಾಲೂಕಿನ ಹನಿಯೂರು ಗ್ರಾಮದ 90 ವರ್ಷ ವಯಸ್ಸಿನ ರಾಚೇಗೌಡರು ಕಳೆದ 35 ವರ್ಷಗಳಿಂದಲೂ ಕಾವ್ಯ ವಾಚನೆಯನ್ನು ಒಂದು ಪ್ರವೃತ್ತಿಯನ್ನಾಗಿಸಿಕೊಂಡು ಕಲಾಸೇವೆಗೈಯ್ಯುತ್ತಾ ಬಂದಿದ್ದಾರೆ. ಇವರು ಓದಿರುವುದು ಕೇವಲ 3 ನೇ ತರಗತಿಯಾದರೂ ಪುರಾತನ, ಆಧುನಿಕ ಹಾಗೂ ಪ್ರಾಚೀನ ಕಾವ್ಯಗಳನ್ನು ಒಂದೂ ತಪ್ಪಿಲ್ಲದಂತೆ ಓದಬಲ್ಲರು. ಅಲ್ಲದೆ ಕೇಳುಗರು ತಲೆದೂಗುವಂತೆ ಅರ್ಥೈಸಬಲ್ಲರು ಸಹ. ಅಲ್ಲದೆ ಸುಸ್ಪಷ್ಟವಾಗಿ, ನಿರರ್ಗಳವಾಗಿ ಓದಿ ಸಾರವತ್ತಾಗಿ ಹೇಳುವ ರೀತಿಗೆ ಎಂತಹ ಪಂಡಿತರೂ ಮೂಗಿನ ಮೇಲೆ ಬೆರಳಿಡಲೇ ಬೇಕು. ಅವರ ಈ ರೀತಿಯ ಕಾವ್ಯ ವಾಚನೆಯನ್ನು ಮೆಚ್ಚಿದ ಕೇಳುಗರು ಅವರನ್ನು ‘ಭಾಗವತಿಕೆಯ ಗುಡ್ಡಣ್ಣ’ ಎಂದೇ ಕರೆದು ತಮ್ಮ ಮೆಚ್ಚುಗೆ ಸೂಚಿಸುತ್ತಾರೆ. ಅಲ್ಲದೆ ಅವರು ಗುಡ್ಡಣ್ಣ ಎಂದೇ ಚಿರಪರಿಚಿತರೂ ಸಹ.
ಇವರು ಪೌರಾಣಿಕ ಗ್ರಂಥಗಳಾದ ರಾಮಾಯಣ, ಮಹಾಭಾರತ, ಜೈಮಿನಿ ಭಾರತ, ವಚನ ಭಾರತ, ಪಂಪಭಾರತ, ವಾಲ್ಮೀಕಿ ರಾಮಾಯಣ., ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ, ಕುಮಾರವ್ಯಾಸ ಭಾರತ, ತುರಂಗ ಭಾರತ, ಬಸವಣ್ಣನವರ ವಚನಗಳು, ಅಕ್ಕನ ವಚನಗಳು, ಮಂಕುತಿಮ್ಮ ಮತ್ತು ಮರುಳ ಮುನಿಯನ ಕಗ್ಗ, …ಇನ್ನು ಮುಂತಾದವುಗಳನ್ನು ಹಾಡಿ, ಸಾರವತ್ತಾಗಿ ವಿವರಿಸಬಲ್ಲರು. ಅವರ ಈ ವಾಚನ ಶೈಲಿಯನ್ನು ನೋಡಿದರೆ ಇಂದಿನ ಎಂತಹ ಮೇಧಾವಿಗಳು ಮೆಚ್ಚಲೇಬೇಕು. ಹಾಗಿದೆ ಅವರ ಕಾವ್ಯ ವಾಚನಾ ವೈಖರಿ.
ನಾಡಿನ ಜಿಲ್ಲೆಗಳಾದ ರಾಮನಗರ, ತುಮಕೂರು, ಮಂಡ್ಯ, ಮೈಸೂರು, ಬೆಂಗಳೂರು ನಗರ ಹಾಗೂ ತಾಲೂಕುಗಳಾದ ಕನಕಪುರ, ಮದ್ದೂರು, ಆನೇಕಲ್, ರಾಮನಗರ, ಮಾಗಡಿ, ಕುಣಿಗಲ್ ಮತ್ತು ಚನ್ನಪಟ್ಟಣಗಳಲ್ಲಿ ತಮ್ಮ ಕಾವ್ಯವಾಚನೆ ಕಾರ್ಯಕ್ರಮಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ. ಗೊಂಬೆನಗರಿಯ ಧಾರ್ಮಿಕ ನೆಲೆಗಳಾದ ಚೌಕೀ ಮಠ, ಹೊನ್ನಪ್ಪ ಸ್ವಾಮಿ ಮಠ, ಚೆನ್ನಪ್ಪಸ್ವಾಮಿ ಮಠ, ಸಿಂಗರಾಜಪುರದ ದೊಡ್ಡಮ್ಮತಾಯಿ ಮಠ ಮುಂತಾದೆಡೆ ತಮ್ಮ ಅಮೋಘ ಕಾವ್ಯವಾಚನಾ ಕಾರ್ಯಕ್ರಮಗಳನ್ನು ಗುಡ್ಡಣ್ಣ ನೀಡಿ ಜನಮಾನಸದಲ್ಲಿ ನೆಲೆಯೂರಿದ್ದಾರೆ.
ಎ. ಆರ್. ಕೃಷ್ಣ ಶಾಸ್ತ್ರೀಗಳು, ಕುವೆಂಪು, ಮತ್ತು ಡಿವಿಜಿ ಅವರನ್ನು ಬಹುವಾಗಿ ಮೆಚ್ಚುವ ಇವರಿಗೆ ಇತ್ತೀಚೆಗೆ ಸರಿಯಾಗಿ ಕಣ್ಣು ಕಾಣಿಸದು. ಆದರೂ ಸದಾ ಕತೆ, ಕಾದಂಬರಿ, ಕಗ್ಗ, ವಚನ, ರಾಮಾಯಣ-ಮಹಾಭಾರತವನ್ನು ಕನ್ನಡಕದ ಸಹಾಯದಿಂದ ಓದುವುದರಲ್ಲಿ ತಲ್ಲೀನರಾಗಿರುತ್ತಾರೆ. ಇವರು ಇಂದಿಗೂ ಹೊಲದಲ್ಲಿ ದುಡಿಯಬಲ್ಲರು. ಇತ್ತೀಚೆಗೆ ಸ್ವಲ್ಪ ಬಳಲಿದಂತಾಗಿರುವ ಇವರು ತಾವು ನೀಡಿದ ಕಾವ್ಯವಾಚನೆಗೆ ಪ್ರತಿಫಲವಾಗಿ ಯಾವುದೇ ದಕ್ಷಿಣೆ ಪಡೆಯುವುದಿಲ್ಲ. ಇಂತಹ ನಿಸ್ವಾರ್ಥ ಕಾವ್ಯ ಸೇವೆ ಮಾಡುತ್ತಿರುವ ಗುಡ್ಡಣ್ಣನವರ ಕಾಯಕ ನಿಷ್ಟೆ ಅನುಸರಣೀಯವಾಗಿದೆ.ಅನುಕ್ಷಣವೂ ಚಟುವಟಿಕೆಯಂದ ಇರುವ ರಾಚೇಗೌಡರು ನಮ್ಮೊಡನಿರುವ ಕಲಾಪ್ರೇಮಿಯೂ ಹೌದು. ಇಂತಹ ಕಲಾ ಪ್ರೇಮಿಯನ್ನು ಇಂದಿಗೂ ಸರಕಾರವಾಗಲೀ, ಸಂಘ-ಸಂಸ್ಥೆಯಾಗಲೀ ಗೌರವಿಸುವ ಸೌಜನ್ಯ ತೋರಿಲ್ಲ. 35 ವರ್ಷಗಳ ಕಾಲ ಕಾವ್ಯ ಸೇವೆ ಮಾಡಿರುವ ಇವರ ಈ ಕಲೆಯನ್ನು ಮುಂದಿನ ಪೀಳಿಗೆಗೂ ತಲುಪಿಸುವ ಬಯಕೆ ಇಟ್ಟುಕೊಂಡಿದ್ದಾರೆ.
–ಹನಿಯೂರು ಚಂದ್ರೇಗೌಡ, ಚನ್ನಪಟ್ಟಣ.

ಶ್ರೀಮಂತ ಸಂಸ್ಕೃತಿಯ ‘ಸಮೃದ್ಧ’ ಜಿಲ್ಲೆ – ರಾಮನಗರ

ಪೀಠಿಕೆ: ಕರುನಾಡಿನ ಇಪ್ಪತ್ತೆಂಟನೆಯ ಜಿಲ್ಲೆಯಾಗಿ ಅಸ್ಥಿತ್ವಕ್ಕೆ ಬಂದ ರಾಮನಗರ ಪ್ರಾಕೃತಿಕ, ಐತಿಹಾಸಿಕ, ಧಾರ್ಮಿಕ, ಬೌದ್ಧಿಕ, ಸಾಂಸ್ಕೃತಿಕವಾಗಿ ಶ್ರೀಮಂತ ಪರಂಪರೆಯ ಜಿಲ್ಲೆ. ಅದರಲ್ಲೂ ರಾಜಕೀಯ ಪ್ರಜ್ಞಾವಂತಿಕೆಯನ್ನು ಮೈಗೂಡಿಸಿಕೊಂಡು ಯಾವುದೇ ವಿಚಾರಕ್ಕೆ ತಕ್ಷಣ ಪ್ರತಿಕ್ರಿಯಿಸುವ ಸಹೃದಯರ ಬೀಡು. ರಾಜಧಾನಿ ಬೆಂಗಳೂರಿಗೆ ಕೇವಲ ಕೆಲವೇ ನಿಮಿಷಗಳಲ್ಲಿ ತಲುಪಿಬಿಡಬಹುದಾದ ರಾಮನಗರ ಇದೀಗ ಅಭಿವೃದ್ಧಿಯತ್ತ ದಾಪುಗಾಲಿಟ್ಟು ಮುನ್ನಡೆಯುತ್ತಿದೆ. ರಾಮನಗರದ ಹೆಸರು ಹೇಳುತ್ತಿದ್ದಂತೆ ರೇಷ್ಮೆ, ವಿಧಾನ ಸೌಧದ ನಿರ್ಮಾತೃ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಂತರಾಯರು, ಬೆಂಗಳೂರು ನಿರ್ಮಾತೃ ಮಾಗಡಿ ಕೆಂಪೇಗೌಡರು, ವಿಶ್ವ ಪ್ರಸಿದ್ಧ ಚನ್ನಪಟ್ಟಣದ ಬಣ್ಣದ ಗೊಂಬೆಗಳು, ‘ಕ್ಲೋಸ್ ಪೇಟೆ’ಯ ಗ್ರಾನೈಟ್, ನಾಗೇಗೌಡರ ಜಾನಪದ ಲೋಕ , ಕಾನಕನಹಳ್ಳಿಯ ಕಾವೇರಿಯ ಬಯಲು ಇತ್ಯಾದಿಗಳೆಲ್ಲ ನೆನಪಾಗುತ್ತವೆ.
ಗಡಿಗಳು: ರಾಮನಗರ ಬೆಂಗಳೂರಿನಿಂದ ಕೇವಲ 50 ಕಿ.ಮೀ ದೂರದಲ್ಲಿದೆ. 2007ರ ಆಗಸ್ಟ್ 23ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಪ್ರತ್ಯೇಕಗೊಂಡು ರಾಜ್ಯದ 28ನೇ ಜಿಲ್ಲೆಯಾಗಿ ಅಸ್ಥಿತ್ವ ಕ್ಕೆ ಬಂತು. ರಾಮನಗರ ಜಿಲ್ಲೆಯ ಉತ್ತರಕ್ಕೆ ಬೆಂಗಳೂರು ಗ್ರಾಮಾಂತರ, ದಕ್ಷಿಣಕ್ಕೆ ಚಾಮರಾಜ ನಗರ, ಮಂಡ್ಯ ಮತ್ತು ತಮಿಳುನಾಡಿನ ಧರ್ಮಪುರಿ ಜಿಲ್ಲೆಗಳು, ಪೂರ್ವಕ್ಕೆ ಬೆಂಗಳೂರು ನಗರ ಜಿಲ್ಲೆ, ಪಶ್ಚಿಮಕ್ಕೆ ತುಮಕೂರು ಮತ್ತು ಮಂಡ್ಯ ಜಿಲ್ಲೆಗಳು ಹೊಂದಿಕೊಂಡಿವೆ.
ವಿಶೇಷತೆ: ಜಿಲ್ಲೆಯ ವ್ಯಾಪ್ತಿಯಲ್ಲಿ ನಾಲ್ಕು (ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ) ತಾಲ್ಲೂಕುಗಳಿವೆ. ವಿಶಿಷ್ಟ ಪರಿಸರದ ಜತೆಗೆ ಗುಡ್ಡಗಳಿಂದಾವೃತವಾಗಿದೆ. ಕುರುಚಲು ಸಸ್ಯ ಮತ್ತು ಮರಗಳಿಂದಾದ ಅರಣ್ಯ ಪ್ರದೇಶ ಜಿಲ್ಲೆಗೆ ವಿಶೇಷ ಸೊಬಗು ನೀಡಿವೆ. ರಾಮನಗರದ ತಪ್ಪಲಲ್ಲೇ ಇರುವ ರಾಮದೇವರ ಬೆಟ್ಟ, ರೇವಣ ಸಿದ್ದೇಶ್ವರ ಬೆಟ್ಟಗಳು ಚಾರಣಿಗರಿಗೆ ನೆಚ್ಚಿನ ತಾಣಗಳಾಗಿವೆ. ಇಲ್ಲಿ ಸಿನೆಮಾ ತೆಗೆಯಲು ಉತ್ತಮ ಪ್ರಾಕೃತಿಕ ಸೌಂದರ್ಯವಿರುವುದರಿಂದ ಚಿತ್ರ ರಸಿಕರ ಮೆಚ್ಚಿನ ಹಾಟ್ ಸ್ಪಾಟ್ ಕೂಡ ಹೌದು. ಇಲ್ಲಿ ಶೂಟಿಂಗ್ ಮಾಡಿದ್ದ ಹಿಂದಿಯ ‘ಶೋಲೆ’ ಸಿನೆಮಾ ಭರ್ಜರಿ ಯಶಸ್ಸು ನೀಡಿದ ಕಾರಣ ಇದು ಶೋಲೆ ಕಾಡು ಎಂದು ಪ್ರಸಿದ್ಧಿಯೂ ಆಯಿತು.
ವಿಸ್ತೀರ್ಣ: ರಾಮನಗರ ಜಿಲ್ಲೆ 3.56 ಲಕ್ಷ ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣ ಹೊಂದಿದೆ. ಇದರಲ್ಲಿ 1.97 ಲಕ್ಷ ಹೆಕ್ಟೇರ್ ಸಾಗುವಳಿ ಭೂಮಿ. ಜಿಲ್ಲೆಯಲ್ಲಿ ಐದು (ಮಂಚನಬೆಲೆ: ಮಾಗಡಿ ತಾ. ಬೈರಮಂಗಲ: ರಾಮನಗರ. ಹಾರೋಬೆಲೆ: ಕನಕಪುರ. ಕಣ್ವ ಮತ್ತು ಇಗ್ಗಲೂರು: ಚನ್ನಪಟ್ಟಣ.) ಜಲಾಶಯಗಳಿವೆ. ಅಲ್ಲದೆ 105 ಕೆರೆ-ಕಟ್ಟೆಗಳಿವೆ. ಕಣ್ವ, ಶಿಂಷಾ, ವೃಷಭಾವತಿ, ಕಾವೇರಿ, ಅರ್ಕಾವತಿ, ಕುಮುದ್ವತಿ ನದಿಗಳು ಜಿಲ್ಲೆಯ ವ್ಯಾಪ್ತಿಯಲ್ಲಿ ಹರಿಯುತ್ತವೆ. ಇಷ್ಟೊಂದು ನದಿ, ಕೆರೆ, ಜಲಾಶಯಗಳಿದ್ದರೂ ಜಿಲ್ಲೆಯ ಬಹುಪಾಲು ಭೂಮಿ ಮಳೆಯನ್ನೇ ಅವಲಂಬಿಸಿದೆ.
ಜನಸಂಖ್ಯೆ: 2001ರ ಗಣತಿ ಪ್ರಕಾರ ಜಿಲ್ಲೆಯ ಜನಸಂಖ್ಯೆ 10,30,546. ಸಾಕ್ಷರತೆಯ ಪ್ರಮಾಣ ಶೇ 61.3. ರೇಷ್ಮೆ ಜಿಲ್ಲೆಯ ಪ್ರಮುಖ ಬೆಳೆ. 1310 ಗ್ರಾಮಗಳ 9,985 ಹೆಕ್ಟೇರ್ ಪ್ರದೇಶದಲ್ಲಿ 20 ಸಾವಿರ ರೈತರು ರೇಷ್ಮೆ ಬೇಸಾಯದಲ್ಲಿ ತೊಡಗಿದ್ದಾರೆ. ಹೆಚ್ಚಿನ ಭಾಗ ಗುಡ್ಡಗಾಡು ಮತ್ತು ಮಳೆಯಾಧಾರಿತ ಭೂಮಿಯಾದ್ದರಿಂದ ಇಲ್ಲಿನ ಕೃಷಿಕರ ಮಾವನ್ನು ಪ್ರಮುಖ ತೋಟಗಾರಿಕೆ ಬೆಳೆಯಾಗಿ ಬೆಳೆಯುತ್ತಾರೆ. ಜಿಲ್ಲೆಯಲ್ಲಿ ಅಂದಾಜು 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುತ್ತಾರೆ. ಜಿಲ್ಲೆಯ ಪ್ರಮುಖ ಆಹಾರ ಬೆಳೆ ರಾಗಿ ಮತ್ತು ಭತ್ತ. ಬೆಂಗಳೂರಿಗೆ ಪೂರೈಕೆ ಯಾಗುವ ತರಕಾರಿಯ ಹೆಚ್ಚಿನ ಭಾಗ ರಾಮನಗರ ಜಿಲ್ಲೆಯದು ಎಂದರೆ ಅತಿಶಯೋಕ್ತಿಯಲ್ಲ. ಿತ್ತೀಚೆಗೆ ಹೂವು ಬೇಸಾಯ ಕೂಡ ಪ್ರಸಿದ್ಧಿಗೆ ಬಂದಿದೆ.
ಗ್ರಾನೈಟ್ ಗಣಿ ತವರು: ರಾಮನಗರ ಹಾಗೂ ಕನಕಪುರ ತಾಲ್ಲೂಕುಗಳು ‘ಗ್ರಾನೈಟ್’ಶಿಲೆಗಳಿಗೆ ಹೆಸರುವಾಸಿ. ದಪ್ಪ ಕಣದ ಸ್ಫಟಿಕ ರಚನೆಯ ಗ್ರಾನೈಟ್ ಇಲ್ಲಿನ ವಿಶೇಷ. ರಾಮನಗರ ಸುತ್ತಮುತ್ತ ಸಿಗುವ ಗ್ರಾನೈಟ್ ‘ಕ್ಲೋಸ್‌ಪೇಟೆ’ ಗ್ರಾನೈಟ್ ಎಂದೇ ಹೆಸರುವಾಸಿ. ಜೊತೆಗೆ ಇಲ್ಲಿ ಕಪ್ಪು ಬಣ್ಣದ ಗ್ರಾನೈಟ್ ಗಣಿ ಇತ್ತೀಚೆಗೆ ಕಂಡು ಬಂದಿವೆ.
ಇತಿಹಾಸ: ಕ್ರಿ.ಶ 4ನೇ ಶತಮಾನದಲ್ಲಿ ಗಂಗ ವಂಶಸ್ಥ ರಾಜರು ರಾಮನಗರ ಭಾಗದಲ್ಲಿ ಆಳ್ವಿಕೆ ನಡೆಸಿದರು. ಚನ್ನಪಟ್ಟಣ ಬಳಿಯ ಮಾಕುಂದ (ಮಂಕುಂದ) ಅವರ ರಾಜಧಾನಿಯಾಗಿತ್ತು. ರಾಷ್ಟ್ರಕೂಟರು, ಹೊಯ್ಸಳರು, ಚೋಳರು, ಕೆಂಪೇಗೌಡರ ವಂಶಸ್ಥರು, ಟಿಪ್ಪುಸುಲ್ತಾನ್, ಮೈಸೂರು ಅರಸರು ಹಾಗೂ ಬ್ರಿಟಿಷರ ಆಡಳಿತಕ್ಕೆ ಈ ಭಾಗ ಒಳಪಟ್ಟಿತ್ತು. ಜಿಲ್ಲೆಯ ಕೆಲವೆಡೆ ಇತಿಹಾಸ ಪೂರ್ವ ಕಾಲದ ಪಳಿಯುಳಿಕೆಗಳು ಲಭ್ಯವಾಗಿವೆ. ತಾಲೂಕಿನ ಹನಿಯೂರು ಗ್ರಾಮದಲ್ಲಿ ಸಿಕ್ಕ ಅನೇಕ ವೀರಗಲ್ಲು ಮತ್ತು ಮಾಸ್ತಿ ಕಲ್ಲುಗಳು ಅನೇಕ ಮಾಹಿತಿ ಮತ್ತು ವಿಚಾರ ತಿಳಿಸುತ್ತವೆ.ಉತ್ತರ ಕರ್ನಾಟಕದಲ್ಲಿ ಬಹುಮನಿ ರಾಜ್ಯ ಪತನವಾದ ನಂತರ ಅಲ್ಲಿನ ಮುಸ್ಲಿಮರು ರಾಮನ ಗರದತ್ತ ವಲಸೆ ಬಂದರು. ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಕಾಲದಲ್ಲಿ ಈ ಭಾಗದ ಮುಸ್ಲಿಮ ರು ಪ್ರವರ್ಧಮಾನಕ್ಕೆ ಬಂದರು. ಜಿಲ್ಲೆಯಲ್ಲಿ ಹಿಂದೂಗಳಷ್ಟೇ ಸಂಖ್ಯೆಯಲ್ಲಿ ಮುಸ್ಲಿಮರಿದ್ದರೂ ಎರಡೂ ಸಮುದಾಯಗಳ ನಡುವೆ ಸೌಹಾರ್ದ ಬಹಳ ಹಿಂದಿನಿಂದಲೂ ಬೆಳೆದುಬಂದಿದೆ.
ಕ್ಲೋಸ್ ಪೇಟೆ: ಪುರಾಣ ಕಾಲದಲ್ಲಿ ರಾಮನಗರಕ್ಕೆ ಶ್ರೀರಾಮಗಿರಿ, ಶಿವರಾಮಗಿರಿ ಎಂಬ ಹೆಸರಿತ್ತು. 1799-1800ರಲ್ಲಿ ‘ಕ್ಲೋಸ್‌ಪೇಟೆ’ ಎಂಬ ಹೆಸರಿನಲ್ಲಿ ನವನಗರವಾಗಿ ನಿರ್ಮಾಣವಾಯಿತು. ಇದನ್ನು ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರು ಸಂಸ್ಥಾನದ ಮೊದಲ ಆಂಗ್ಲ ರೆಸಿಡೆಂಟ್ ಆಗಿದ್ದ ಕರ್ನಲ್ ಕ್ಲೋಸ್ ಅವರ ಮೇಲಿನ ವಿಶ್ವಾಸಕ್ಕಾಗಿ 1799-80ರಲ್ಲಿ ಕ್ಲೋಸ್‌ಪೇಟೆ ಯನ್ನು ಸ್ಥಾಪಿಸಿದರು ಎಂದು ಇತಿಹಾಸದಲ್ಲಿ ದಾಖಲಾಗಿದೆ. ಕರ್ನಲ್ ಕ್ಲೋಸ್ ಮೂರನೇ ಆಂಗ್ಲೊ- ಮೈಸೂರು ಯುದ್ಧದ ಸಮಯದಲ್ಲಿ ಗವರ್ನರ್ ಜನರಲ್ ಲಾರ್ಡ್ ಕಾರನ್‌ವಾಲೀಸ್ ಅವರ ಕೈಕೆಳಗೆ ಡೆಪ್ಯುಟಿ ಅಡ್ಜುಟೆಂಟ್ ಜನರಲ್ ಆಗಿದ್ದರು. ನಾಲ್ಕನೇ ಆಂಗ್ಲೊ- ಮೈಸೂರು ಯುದ್ಧದ ವೇಳೆಗೆ ಅವರು ‘ಅಡ್ಜುಟೆಂಟ್ ಜನರಲ್’ ಆದರು. ಟಿಪ್ಪು ಮರಣದ ನಂತರ ಅವರು ಮೈಸೂರು ರಾಜ ಮನೆತನ ಹಾಗೂ ರಾಜ್ಯಾಡಳಿತ ಪುನರ್ ವ್ಯವಸ್ಥೆ ಸಮಿತಿಯ ಸದಸ್ಯರೂ ಆದರು. 1799ರಲ್ಲಿ ಸಂಸ್ಥಾನದ ಪ್ರಥಮ ಬ್ರಿಟಿಷ್ ರೆಸಿಡೆಂಟ್ ಆಗಿ ಅಂದಿನ ದಿವಾನರಾದ ಪೂರ್ಣಯ್ಯ ಅವರೊಂದಿಗೆ ರಾಮನಗರ ಭಾಗದಲ್ಲಿ ಸಂಚಾರ ಕೈಗೊಂಡರು. ಆಗ ತುಂಬಿ ಹರಿಯುತ್ತಿದ್ದ ಅರ್ಕಾವತಿ ನದಿ ದಾಟಲು ಅಲ್ಲಿನ ಹೊಳೆಸಾಲಿನ ಹಳ್ಳಿ ಜನರು ಅವರಿಗೆ ನೆರವು ನೀಡಿದರು ಅದರ ನೆನಪಿಗೆ ಇಲ್ಲಿ ಊರು ನಿರ್ಮಿಸಲು ಕರ್ನಲ್ ಕ್ಲೋಸ್ ಆದೇಶ ನೀಡಿದರು ಎಂಬ ಐತಿಹ್ಯವಿದೆ.1884ರವರೆಗೆ ಮೈಸೂರು ಸಂಸ್ಥಾನದ ಉಪ ವಿಭಾಗೀಯ ಕೇಂದ್ರವಾಗಿದ್ದ ‘ಕ್ಲೋಸ್‌ಪೇಟೆ’ 1928 ರಲ್ಲಿ ತಾಲ್ಲೂಕು ಕೇಂದ್ರವಾಯಿತು. ಸ್ವಾತಂತ್ರ್ಯಾನಂತರ 1949ರಲ್ಲಿ ಕ್ಲೋಸ್‌ಪೇಟೆಗೆ ‘ರಾಮನಗರ’ ಎಂದು ನಾಮಕರಣ ಮಾಡಲಾಯಿತು. ಈಗಲೂ ಅದನ್ನು ಕೆಲವು ಹಿರಿಯ ಜೀವಗಳು ಅದನ್ನು ‘ಕುಲೀಸ್ ಪ್ಯಾಟೆ’ ಅಂತಲೇ ಕರೆಯುವುದು ಸಾಮಾನ್ಯವಾಗಿದೆ.
ಸಪ್ತ ಬೆಟ್ಟಗಳ ಜಿಲ್ಲೆ: ರಾಮನಗರ ಜಿಲ್ಲೆಯು ಏಳು ಪ್ರಮುಖ ಬೆಟ್ಟಗಳ ತವರು. ಶ್ರೀರಾಮಗಿರಿ, ರೇವಣ ಸಿದ್ದೇಶ್ವರ ಬೆಟ್ಟ, ಯತಿರಾಜಗಿರಿ, ಕೃಷ್ಣಗಿರಿ, ಸೋಮಗಿರಿ, ಸಿಡಿಲಕಲ್ಲು ಮತ್ತು ಜಲಸಿದ್ದೇಶ್ವರ ಬೆಟ್ಟಗಳಿವೆ. ಈ ಪ್ರದೇಶವನ್ನು ‘ಸಪ್ತಗಿರಿಗಳ ಜಿಲ್ಲೆ’ ಎಂದು ಕರೆಯುತ್ತಾರೆ. ಇವುಗಳಲ್ಲದೆ ಹಂದಿಗುಂದಿ ಬೆಟ್ಟ, ವಾಡೆ ಮಲ್ಲೇಶ್ವರ ಬೆಟ್ಟ, ಅಚ್ಚಲು ಬೆಟ್ಟ, ಸೋಮದೇವರ ಬೆಟ್ಟ, ಕೂಟಗಲ್ ಬೆಟ್ಟ ಮುಂತಾದವುಗಳಿವೆ..
* ಚನ್ನಪಟ್ಟಣದಲ್ಲಿ ಗವಿರಂಗಸ್ವಾಮಿ ಬೆಟ್ಟ, ಸವಣಪ್ಪನ ಗುಡ್ಡ, ಮುತ್ತಪ್ಪನ ಗುಡ್ಡ;
** ಕನಕಪುರದಲ್ಲಿ, ಕಬ್ಬಾಳಮ್ಮನ ದುರ್ಗ, ನಿಡಗಲ್ಲು, ಮೇಕೆದಾಟು, ಬಿಳಿಕಲ್ ಬೆಟ್ಟ, ಮುದುವಾಡಿ ಬೆಟ್ಟಗಳು,
*** ಮಾಗಡಿಯಲ್ಲಿ, ಇತಿಹಾಸ ಪ್ರಸಿದ್ಧ ಸಾವನದುರ್ಗ, ಬನತಿಮ್ಮನ ಬೆಟ್ಟ, ನರಸಿಂಹದೇವರ ಬೆಟ್ಟ, ಕಲ್ಯಾ ಗುಡ್ಡಗಳಿವೆ. ಅದರಲ್ಲೂ,
**** ರಾಮದೇವರ ಬೆಟ್ಟ, ಸಾವನದುರ್ಗ ಬೆಟ್ಟ, ಮೇಕೆದಾಟು, ಸಂಗಮ,ಚುಂಚಿಫಾಲ್ಸ್ ಗಳು ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲದೆ ಚಾರಣಪ್ರಿಯರ ಮೆಚ್ಚಿನ ತಾಣಗಳೂ ಹೌದು.
ಉಪಸಂಹಾರ: ರಾಮನಗರದಿಂದ 2 ಕಿ.ಮೀ ದೂರದಲ್ಲಿ ಮೈಸೂರು ಹೆದ್ದಾರಿಗೆ ಅಂಟಿಕೊಂಡಿರುವ ಅರ್ಚಕರಹಳ್ಳಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಕ್ಯಾಂಪಸ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿದೆ. ಮಾಗಡಿ ಯಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಗೆ ಜಾಗ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸ ಲಾಗಿತ್ತಾದರೂ ಅದು ಕೈತಪ್ಪಿಹೋಯಿತು.. ಚನ್ನಪಟ್ಟಣದ ಸಿಲ್ಕ್ ಫಾರಂ ಬಳಿಯಲ್ಲಿ ರಾಜ್ಯ ಪೊಲೀಸ್ ಶಿಕ್ಷಣ ತರಬೇತಿ ಶಾಲೆ ಕಾರ್ಯನಿರ್ವಹಿಸುತ್ತಿದೆ.ಅಲ್ಲದೆ, ಏಷ್ಯಾ ಖಂಡದಲ್ಲೇ ಅತಿ ದೊಡ್ಡದಾದ ರೇಷ್ಮೆ ಮಾರುಕಟ್ಟೆ ಹೊಂದಿರುವ ಹೆಗ್ಗಳಿಕೆಯಿದೆ.
– ಹನಿಯೂರು ಚಂದ್ರೇಗೌಡ, ಚನ್ನಪಟ್ಟಣ.

ಮಾಕುಂದ: ವಿನಾಶದ ಅಂಚಿನಲ್ಲಿ ಇತಿಹಾಸದ ಕುರುಹು

ರಾಮನಗರ: ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಬಿದ್ದಿರುವ ಗತಕಾಲದ ಕುರುಹುಗಳು...  ಸಂರಕ್ಷರೇ ಇಲ್ಲದೆ ಸೊರಗಿರುವ ಹತ್ತಾರು ವೀರಗಲ್ಲು, ಮಹಾಸತಿ ಕಲ್ಲುಗಳು... ಸರಿಯಾದ ನಿರ್ವಹಣೆ ಇಲ್ಲದೆ ವಿನಾಶದ ಅಂಚು ತಲುಪುತ್ತಿರುವ ಸ್ಮಾರಕಗಳು... ಗ್ರಾಮದ ಜನತೆ ಮತ್ತು ಪ್ರಾಚ್ಯ ವಸ್ತು ಇಲಾಖೆಯ ತಾತ್ಸಾರ, ನಿರ್ಲಕ್ಷ್ಯದಿಂದ ಬೀದಿ ಪಾಲಾಗಿರುವ ಗತಕಾಲದ ಸಾಧಕರ ಹೆಜ್ಜೆ ಗುರುತುಗಳು... ಇದರಿಂದ ಕಣ್ಮರೆಯಾಗುತ್ತಿರುವ ಇತಿಹಾಸ ರಚನೆಯ ಮೂಲ ಆಕಾರಗಳು...
ಇದು ಚನ್ನಪಟ್ಟಣ ತಾಲ್ಲೂಕಿನ ಮಂಕುಂದ ಅಥವಾ ಮಾಕುಂದ ಗ್ರಾಮದಲ್ಲಿನ ಇತಿಹಾಸದ ಕುರುಹುಗಳಿಗೆ ಎದುರಾಗಿರುವ ದುಃಸ್ಥಿತಿ.
ರಾಜ್ಯದ ಇತಿಹಾಸದ ಪುಟಗಳಲ್ಲಿ ತನ್ನದೇ ಆದ ಮಹತ್ವದ ಸ್ಥಾನ ಹೊಂದಿರುವ ಗಂಗರ ಸಾಮ್ರಾಜ್ಯದ ನಾಲ್ಕು ರಾಜಧಾನಿಗಳಲ್ಲಿ ಒಂದಾಗಿದ್ದ ಮಾಕುಂದಕ್ಕೆ ಇಂದು ಮಂಕು ಕವಿದಿದೆ. ಹಾಗಾಗಿ ಇಲ್ಲಿ ತನ್ನ ಪೂರ್ವಿಕರ ಇತಿಹಾಸವನ್ನು ಸಾರುವ ಹಲವಾರು ವೀರಗಲ್ಲುಗಳು ಮತ್ತು ಮಹಾಸತಿ ಕಲ್ಲುಗಳು ಸರಿಯಾಗಿ ರಕ್ಷಣೆ ಇಲ್ಲದೆ, ನಾಶವಾಗುತ್ತಿವೆ.
ಕ್ರಿ.ಶ 350ರಿಂದ 999ರವರೆಗೆ ರಾಜ್ಯವಾಳಿದ ಗಂಗರು ರಾಜ್ಯದಲ್ಲಿ ಕೋಲಾರ, ತಲಕಾಡು, ಮಾಕುಂದ ಹಾಗೂ ಮಣ್ಣೆ (ನೆಲಮಂಗಲ ಬಳಿ)ಯನ್ನು ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ್ದರು. ಗಂಗರು ಹೆಚ್ಚು ಕಾಲ ತಲಕಾಡಿನಲ್ಲಿ ಆಡಳಿತ ನಡೆಸಿದರಾದರೂ ಹಲವು ರಾಜರು ಉಳಿದ ಮೂರು ರಾಜಧಾನಿಗಳಲ್ಲಿ ಆಳ್ವಿಕೆ ನಡೆಸಿದ್ದರು.
ಈ ಬಗ್ಗೆ ಇತಿಹಾಸ ತಜ್ಞರು, ಶಾಸನ ತಜ್ಞರು ಮತ್ತು ಪುರಾತತ್ವ ಇಲಾಖೆಯವರು ಹಲವು ಸಂಶೋಧನೆಗಳನ್ನು ಕೈಗೊಂಡು ಲಭ್ಯ ಆಕರಗಳ ನೆರವಿನಿಂದ ಕೆಲ ರಾಜರುಗಳ ಆಳ್ವಿಕೆಯ ಇತಿಹಾಸವನ್ನು ಬರೆದಿದ್ದಾರೆ. ಈಗಲೂ ಸಂಶೋಧನೆಗಳು ನಡೆಯುತ್ತಲೇ ಇವೆ. ಆಕರಗಳ ಕೊರತೆಯಿಂದ ಸಂಪೂರ್ಣ ಮತ್ತು ಸಮಗ್ರ ಇತಿಹಾಸ ರಚನೆ ಇಲ್ಲಿಯವರೆಗೂ ಸಾಧ್ಯವಾಗಿಲ್ಲ ಎಂಬ ಕೊರಗು ತಜ್ಞರಲ್ಲಿದೆ.
ಇಂತಹ ಸಂದರ್ಭದಲ್ಲಿ ತನ್ನ ಊರಿನ ಇತಿಹಾಸ ಸಾರುವ ಮೂಲ ಆಕರಗಳನ್ನು ಸಂರಕ್ಷಿಸಿಕೊಳ್ಳಬೇಕಾದ ಗ್ರಾಮದ ಜನತೆ, ಮುಖಂಡರು ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳು ಇವುಗಳ ರಕ್ಷಣೆಗೆ ಕಿಮ್ಮತ್ತು ನೀಡದೆ ನಿರ್ಲಕ್ಷಿಸಿದ್ದಾರೆ ಎಂಬ ದೂರುಗಳು ವ್ಯಾಪಕವಾಗಿವೆ. ಅದಕ್ಕೆ ಮಾಕುಂದ ಗ್ರಾಮದಲ್ಲಿನ ವೀರಗಲ್ಲು, ಮಹಾಸತಿ ಕಲ್ಲುಗಳಿಗೆ ಒದಗಿರುವ ದುಃಸ್ಥಿತಿಯೇ ಸಾಕ್ಷಿ.
ಗ್ರಾಮದಲ್ಲಿ ಎಂಟರಿಂದ ಹತ್ತು ವೀರಗಲ್ಲುಗಳು, ಎರಡು ಮಹಾಸತಿ ಕಲ್ಲುಗಳು ದೊರೆತಿವೆ. ಹಲವು ವೀರಗಲ್ಲುಗಳನ್ನು ಶಾಲೆ ಆವರಣದ ಹಿಂಭಾಗದಲ್ಲಿ ಹೇಗೆಂದರೆ ಹಾಗೆ ಇಡಲಾಗಿದೆ. ಗಂಗರ ಆನೆಯ ಲಾಂಛನ ಹೊಂದಿರುವ ಶಾಸನ ಕೂಡ ಇಲ್ಲಿದೆ. ಶಾಲಾ ಬಳಿ ಇರುವ ವೀರಗಲ್ಲುಗಳ ಸುತ್ತ ಗಿಡಗಂಟಿಗಳು ಬೆಳೆದು ನಿಂತಿವೆ. ಕೆಲ ಕಲ್ಲುಗಳಂತೂ ಕೆಳಗೆ ಬಿದ್ದು ನಾಶವಾಗಿವೆ. ಇನ್ನೂ ಕೆಲವು ನಾಶವಾಗುವ ಅಂಚಿನಲ್ಲಿವೆ. ಅವುಗಳ ರಕ್ಷಣೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಗ್ರಾಮದ ಜನತೆ, ಗ್ರಾಮ ಪಂಚಾಯಿತಿ ಅಥವಾ ಶಾಲೆಯ ಎಸ್‌ಡಿಎಂಸಿ ಸದಸ್ಯರು ಮುಂದಾಗಿಲ್ಲ ಎಂಬ ದೂರು ಇದೆ.
ಮಾಕುಂದ/ಮಂಕುದದ ಇತಿಹಾಸ: ಗಂಗರ ಮೂರನೇ ರಾಜಧಾನಿಯಾಗಿದ್ದ ಮಾಕುಂದದಲ್ಲಿ ಗಂಗರ ರಾಜರು ಸುಮಾರು 150 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದರು. ಗಂಗರ ಪ್ರಸಿದ್ಧ ದೊರೆ ದುರ್ವಿನೀತನ ನಂತರ ಬಂದ ಭೂ ವಿಕ್ರಮ ಮತ್ತು ಶಿವಮಾರ ರಾಜರು ಮಾಕುಂದವನ್ನು ರಾಜಧಾನಿಯನ್ನಾಗಿಸಿಕೊಂಡು ಆಳ್ವಿಕೆ ನಡೆಸಿದ. ಕ್ರಿ.ಶ.7ನೇ ಶತಮಾನದಲ್ಲಿ ಈ ಇಬ್ಬರು ರಾಜರು ಇಲ್ಲಿ ಆಳ್ವಿಕೆ ನಡೆಸಿದರು.

ಈ ಪ್ರದೇಶವನ್ನು ಚೋಳರು ನಾಶಪಡಿಸಿರಬಹುದು. ಕ್ರಿ.ಶ 913ರಲ್ಲಿ ಮಂಕುಂದ ಎಂಬುದರ ಉಲ್ಲೇಖ ಗಂಗರ ದಾಖಲೆಗಳಲ್ಲಿ ಕಂಡು ಬರುತ್ತದೆ ಎಂಬ ಅಂಶವನ್ನು  ಕರ್ನಾಟಕ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ.
ಇವರ ನಂತರ ಅಧಿಕಾರಕ್ಕೆ ಬಂದ ಗಂಗರ ಮತ್ತೊಬ್ಬ ಪ್ರಮುಖ ದೊರೆ ಶ್ರೀಪುರುಷ ರಾಜಧಾನಿಯನ್ನು ನೆಲಮಂಗಲ ಬಳಿ ಇರುವ ಮಣ್ಣೆಗೆ ವರ್ಗಾಯಿಸಿದ. ಸುಮಾರು 150 ವರ್ಷಗಳ ಕಾಲ ಮಾಕುಂದ ಗಂಗರ ರಾಜಧಾನಿಯಾಗಿ ದರ್ಬಾರು ನಡೆಸಿತ್ತು ಎಂಬುದು ಇತಿಹಾಸ ತಜ್ಞರ ವಿಶ್ಲೇಷಣೆ.
ಅನ್ವೇಷಣೆ ಆಗಬೇಕು: `ಸುದೀರ್ಘ ಕಾಲ ರಾಜಧಾನಿಯಾಗಿದ್ದ ಮಾಕುಂದ ಭಾಗದ ಸುತ್ತಮುತ್ತ ದೊಡ್ಡ ಪ್ರಮಾಣದಲ್ಲಿ ಶೋಧನೆ ಮತ್ತು ಅನ್ವೇಷಣೆ ನಡೆದರೆ ಇನ್ನಷ್ಟು ದಾಖಲೆಗಳು ದೊರೆಯಬಹುದು.`ಈಗಾಗಲೇ ಮಾಕುಂದದಲ್ಲಿ ದೊರೆತಿರುವ ಎರಡು ಮೂರು ಶಾಸನಗಳ ಅಧ್ಯಯನ ನಡೆದಿದೆ. ಆದರೆ ಅದರಿಂದ ಅಂತಹ ಮಹತ್ತರ ಮಾಹಿತಿಗಳೇನೂ ಬೆಳಕಿಗೆ ಬಂದಿಲ್ಲ. ಆದ್ದರಿಂದ ಈ ಸ್ಥಳದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಾಕ್ತನ ಶೋಧನೆ ನಡೆಯಬೇಕಿದೆ~ ಎಂದು ಅವರು ಹೇಳುತ್ತಾರೆ.