Tuesday, March 11, 2014

ಶ್ರೀ ಬ್ರಹ್ಮಣ್ಯತೀರ್ಥರು

ಜ್ಞಾನಮಂಟಪವೆಂದು ಪ್ರಸಿದ್ಧವಾದ ಅಬ್ಬೂರಿನ ಭವ್ಯ ಬೃಂದಾವನದಲ್ಲಿ ವಿರಾಜಮಾನ ರಾಗಿರುವ ಭಾಸ್ಕರಾಂಶ ಸಂಭೂತರಾದ ಶ್ರೀ ಬ್ರಹ್ಮಣ್ಯತೀರ್ಥರ ಸಿದ್ಧಿ ಸಾಧನೆಗಳು ಅಪೂರ್ವ ವಾದುದು. ಸನ್ಯಾಸಿಗಳು ಹೇಗಿರಬೇಕೆಂದು ತಮ್ಮ ಬದುಕಿನ ಮೂಲಕ ತಿಳಿಸಿಕೊಟ್ಟ ಅವರು ಸನ್ಯಾಸ ಕುಲಕ್ಕೆ ಕಾಂತಿಯುತ ದೀಪದಂತೆ ಬೆಳಗಿದ ಯತಿವರೇಣ್ಯರು.
ಕನರ್ಾಟಕ ವಿದ್ಯಾಸಿಂಹಾಸನಾಧೀಶ್ವರರಾದ ಶ್ರೀ ವ್ಯಾಸರಾಜರಂತಹ ಸೀಮಾಪುರುಷರನ್ನು ಆಧ್ಯಾತ್ಮ ಜಗತ್ತಿಗೆ ಬಳುವಳಿಯಾಗಿ ಕೊಟ್ಟ ಹಿರಿಮೆ ಅವರದು.
ಶ್ರೀ ಬ್ರಹ್ಮಣ್ಯತೀರ್ಥರ ಬೃಂದಾವನವಿರುವುದು ಬೆಂಗಳೂರು ಸಮೀಪದ ಮೈಸೂರು ಹೆದ್ದಾರಿಯ ರಾಮನಗರ ತಾಲ್ಲೂಕು ಚನ್ನಪಟ್ಟಣದಿಂದ ಸುಮಾರು 5 ಕಿ.ಮೀ. ದೂರದ ಸುಂದರ ಪ್ರಾಕೃತಿಕ ನೆಲೆಯಾದ ಅಬ್ಬೂರಿನಲ್ಲಿ. ಅಬ್ಬೂರು ಸಾತ್ವಿಕ ಪರಿಸರದ ದೈವಿಕ ಗ್ರಾಮ. ಚಾರಿತ್ರಿಕವಾಗಿ, ಪೌರಾಣಿಕವಾಗಿ ಪ್ರಾಮುಖ್ಯತೆ ಪಡೆದಿರುವ ಅಬ್ಬೂರು ಈ ಹಿಂದೆ ಚಿಕ್ಕಗಂಗವಾಡಿ ಅರಸು ಮನೆತನದ ರಾಜಧಾನಿಯಾಗಿತ್ತು. ಚೋಳರ ಕಾಲದಲ್ಲಿ ಈ ಸ್ಥಳ `ಅಪ್ಪಿಯೂರು ಎಂದು ಕರೆಯಲ್ಪಟ್ಟು, ತಮಿಳು ಭಾಷೆಯ ಈ ಅಪ್ಪಿಯೂರು ಕನ್ನಡದಲ್ಲಿ ಅಭಿಯೂರಾಗಿ ನಂತರ ಅಬ್ಬೂರಾಗಿದೆ.
ಅಬ್ಬೂರು ಪ್ರದೇಶವನ್ನು ಬ್ರಹ್ಮಾಂಡ ಪುರಾಣದ ಶ್ರೀ ಅಪ್ರಮೇಯ ಮಹಾತ್ಮ್ಯೆಯಲ್ಲಿ ಜ್ಞಾನಮಂಟಪ ಎಂದು ಕರೆಯಲಾಗಿದೆ. ಜೀವನದಲ್ಲಿ ಮುಂದಿನ ನೆಲೆಗಾಣದೆ ಹತಾಶವಾಗಿರುವ ಹೃದಯ ಗಳಲ್ಲಿ ಚೈತನ್ಯದ ಛಾಪು ಮೂಡಿಸಿ, ಅಜ್ಞಾನ ಅಂಧಕಾರ ದಲ್ಲಿ ತೊಳಲಾಡುತ್ತಿರುವ ಸಹಸ್ರಾರು ಜೀವಿಗಳಿಗೆ ಆಧ್ಯಾತ್ಮದ ಅರಿವಿತ್ತು ಪೋಷಿಸುವ ಜ್ಞಾನಮಂಟಪ. ಈ ಕ್ಷೇತ್ರ ಕೇವಲ ಜ್ಞಾನಮಂಟಪ ವಷ್ಟೇ ಅಲ್ಲದೆ ಜ್ಞಾನಿ ವರೇಣ್ಯರಾದ ಶ್ರೀ ಪುರುಷೋತ್ತಮ ತೀರ್ಥರು, ಶ್ರೀ ಬ್ರಹ್ಮಣ್ಯ ತೀರ್ಥರು, ಶ್ರೀಪಾದರಾಜರು, ಶ್ರೀ ವ್ಯಾಸರಾಜರು ಮೊದಲಾದ ಯತಿಪುಂಗವರು ಮಂಟಪದ ಸ್ತಂಬಗಳಂತೆ ನಿಂತು, ಸಾಧನೆ ಮಾಡಿ ಸಿದ್ಧಿ ಪಡೆದಿದ್ದರಿಂದ ಇದು ಜ್ಞಾನಿಗಳ ಮಂಟಪವಾಗಿಯೂ ಶೋಭಿಸುತ್ತದೆ. ಜ್ಞಾನಾಕಾಂಕ್ಷಿಗಳಾಗಿ ಬರುವವರಿಗೆ ಮಂಟಪದಂತೆ ಆಶ್ರಯವಿತ್ತು, ವಿನೀತಗುರುಗಳ ಗುರುತನ್ನು ತೋರಿ, ಜ್ಞಾನಾರ್ಜನೆಗೆಂದು ಮಾರ್ಗದಲ್ಲಿ ಎದುರಾಗುವ ಸಕಲ ಸಂಕಷ್ಟಗಳನ್ನು ನಿವಾರಿಸಿ, ಜ್ಞಾನಗಮ್ಯನ ದಿವ್ಯದರ್ಶನ ವೀಯುವ, ಜ್ಞಾನಧನವನ್ನು ಗಳಿಸಬೇಕೆಂಬ ಹೆಬ್ಬಯಕೆ ಮೂಡಿಸುವ ಜ್ಞಾನದೇಗುಲವೂ ಆಗಿದೆ ಈ ಅಬ್ಬೂರು.
ಇಲ್ಲಿಯ ಮಣ್ಣಿನಲ್ಲಿ ಅನಘ್ರ್ಯ ರತ್ನಗಳೇ ತುಂಬಿವೆ ಎಂದರೆ ತಪ್ಪಾಗಲಾರದು. ಈ ತಪೋಭೂಮಿಯು ಬೂದಿಮುಚ್ಚಿದ ಕೆಂಡದಂತೆಯೂ, ಮೋಡಮುಸುಕಿದ ಸೂರ್ಯಚಂದ್ರರಂತೆ ಇದ್ದು, ಭಕ್ತಿ ಜ್ಞಾನ ವೈರಾಗ್ಯಗಳ ನೆಲೆವೀಡಾಗಿದೆ.

No comments:

Post a Comment